ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಸ್.ಜಯಕುಮಾರ ಬುಧವಾರ ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಭೂತರಾಮನಹಟ್ಟಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅನೀರಿಕ್ಷಿತ ಭೇಟಿ ನೀಡಿದ್ದರು.
ಶಾಲೆಯ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಕ್ಕಳ ಚಟುವಟಿಕೆಗಳನ್ನು ಆಲಿಸಿದ ಜಯಕುಮಾರ, ಮಕ್ಕಳೊಂದಿಗೆ ಮಕ್ಕಳಾಗಿ ಹಲವು ಸಲಹೆಗಳನ್ನು ನೀಡಿ ಮಕ್ಕಳನ್ನು ಹುರುದುಂಬಿಸಿದರು. ನಿಮ್ಮ ಭವಿಷ್ಯ ರೂಪಿಸಿಕೊಳ್ಳವ ಸಲುವಾಗಿ ದಿನಾಲೂ ಕಠಿಣ ಪರಿಶ್ರಮದೊಂದಿಗೆ ಅಭ್ಯಾಸವನ್ನು ರೂಪಿಸಕೊಳ್ಳಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಡಯೆಟ್ ಹಿರಿಯ ಉಪನ್ಯಾಸಕ ಆರ್ ಟ ಬಳಿಗಾರ, ಸುಗ್ರಾಮ ಯೋಜನೆ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಹಲ್ಯಾಳಿ ಇದ್ದರು. ಶಾಲೆಯ ಆವರಣದಲ್ಲಿ ರಂಗೋಲಿಯಲ್ಲಿ ಮಕ್ಕಳಿಂದ ಬಿಡಿಸಿರುವ ಭಾರತದ ನಕ್ಷೆ ಆಕರ್ಷಿಸುವಂತಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ