ಪ್ರಗತಿವಾಹಿನಿ ಸುದ್ದಿ, ಮಂಗಳೂರು
ಮಸ್ಸೂರಿ ಪರ್ವತ ಪ್ರದೇಶದಲ್ಲಿ ಕಳೆದು ಹೋಗಿದ್ದ ಮೊಬೈಲ್ ಅರಣ್ಯ ಪಾಲಕನ ಪ್ರಾಮಾಣಿಕತೆಯಿಂದಾಗಿ ಮಂಗಳೂರಿನ ಮಾಲಿಕರ ಕೈಗೆ ತಲುಪಿದ.
ಐಐಟಿ ರೂರಕಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ತಾಂತ್ರಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಮಂಗಳೂರಿನ ಸಹ್ಯಾದ್ರಿ ಇಂಜಿನೀರಿಂಗ್ ಕಾಲೇಜಿನ 25 ವಿದ್ಯಾರ್ಥಿಗಳ ತಂಡ ತೆರಳಿತ್ತು. ಮಸ್ಸೂರಿನ ಪರ್ವತ ಪ್ರದೇಶದಲ್ಲಿರುವ ಸುರಖಂಡಾದೇವಿ ದೇವಸ್ಥಾನಕ್ಕೆ ಹೋದಾಗ ಹಿಮದಲ್ಲಿ ಆಟವಾಡುತ್ತಿರುವಾಗ ತಂಡದ ನಾಯಕಿ ಬಸವರಾಜೇಶ್ವರಿಯ ಮೊಬೈಲ್ ಕಳೆದು ಹೋಗಿತ್ತು.
5 ದಿನಗಳ ನಂತರ ಆಕಸ್ಮಿಕವಾಗಿ ಪ್ರವೀಣ್ ಧನವಾಲ್ ಅರಣ್ಯಪಾಲಕ ಅವರಿಗೆ ದೊರಕಿತ್ತು. ದಿನಾಲೂ ಮೊಬೈಲ್ ಗೆ ಕರೆ ಮಾಡಿ ಪರೀಕ್ಷಿಸುತ್ತಿದ್ದ ಮಾಲಕರಿಗೆ ಉತ್ತರಿಸಿದ ಪ್ರವೀಣ್ ಮೊಬೈಲ್ ತನ್ನ ಹತ್ತಿರ ಇರುವುದಾಗಿ ಹೇಳಿದರು. ನಂತರ ತನ್ನ ಪೊಲೀಸ್ ಗೆಳೆಯನ ಸಹಾಯದಿಂದ ಕೋರಿಯರ್ ಮುಖಾಂತರ ಪ್ರಾಮಾಣಿಕವಾಗಿ ತಲುಪಿಸಿದ್ದಾರೆ.
ಪ್ರವೀಣ್ ಅವರಿಗೆ ಮಾಲಕರು ಧನ್ಯವಾದ ಗಳನ್ನು ಫೋನ್ ಮುಖಾಂತರ ತಿಳಿಸಿದ್ದಾರೆ. ಮೊಬೈಲ್ ನ್ನು ಕಳೆದುಕೊಂಡು ಎಷ್ಟೋ ಜನರಿಗೆ ಮರಳಿ ದೊರೆತಿಲ್ಲ. ಆದರೆ ಉತ್ತರ ಭಾರತದಲ್ಲಿ ಕಳೆದುಕೊಂಡ ಮೊಬೈಲ್ ದಕ್ಷಿಣ ಭಾರತದಲ್ಲಿ ಕೈ ಸೇರಿದಾಗ ಬಸವರಾಜೇಶ್ವರಿ ಅವರಿಗೆ ಖುಷಿಯೋ ಖುಷಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ