ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಸಂಬಾಜಿ ಪಾಟೀಲ ಪುತ್ರ ಸಾಗರ್ ಸೋಮವಾರ ರಾತ್ರಿ ಬೆಂಗಳೂರಿನಿಂದ ಬರುವಾಗ ರೈಲ್ವೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
5-6 ಜನ ಸೇರಿ ಬೆಂಗಳೂರಿಗೆ ತೆರಳಿದ್ದರು. ಚನ್ನಮ್ಮ ಎಕ್ಸಪ್ರೆಸ್ ನಲ್ಲಿ ವಾಪಸ್ ಬರುವಾಗ ಎಲ್ಲರೂ ಸೇರಿ ಊಟಕ್ಕೆ ಕುಳಿತಿದ್ದರು. ಸಾಗರ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋದವರು ವಾಪಸ್ ಬರಲೇ ಇಲ್ಲ. ಆದರೆ ಅವರು ಯಶವಂತಪುರದ ಬಳಿ ರೈಲ್ವೆಯಿಂದ ಬಿದ್ದು ಸಾವನ್ನಪ್ಪಿದ್ದರು.
ಈ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೆ ತಿಳಿಯಬೇಕಿದೆ. .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ