Latest

ಮಾಳಮಾರುತಿ ಪೊಲೀಸರ ಕಾರ್ಯಾಚರಣೆ: ಕಳ್ಳರಿಬ್ಬರ ಬಂಧನ, 1.73 ಲಕ್ಷ ರೂ. ವಸ್ತುಗಳ ವಶ

   

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಬ್ಬರು ಕಳ್ಳರನ್ನು ಬಂಧಿಸಿರುವ ಮಾಳಮಾರುತಿ ಠಾಣೆಯ ಪೊಲೀಸರು ಅವರಿದ 1.73 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಡಿದ್ದಾರೆ.

ಪೊಲೀಸ್ ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ರುಕ್ಮಿಣಿ ನಗರದ ಮಂಜುನಾಥ ಕಲ್ಲಪ್ಪ ಹಲಗತ್ತಿ (21) ಹಾಗೂ ಪ್ರಶಾಂತ ಲಕ್ಷ್ಮಣ ರಾಠೋಡ (22) ಬಂಧಿತರು. ಇವರಿಂದ 1.58 ಲಕ್ಷ ರೂ. ಮೌಲ್ಯದ ಬೆಳ್ಳಿ-ಬಂಗಾರದ ಆಭರಣ ಹಾಗೂ 15 ಸಾವಿರ ರೂ ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ. 

ಪೊಲೀಸ್ ಕಮಿಶನರ್ ಡಿ.ಸಿ.ರಾಜಪ್ಪ, ಡಿಸಿಪಿಗಳಾದ ಸೀಮಾ ಲಾಟ್ಕರ್ ಹಾಗೂ ಮಹಾನಿಂಗ ನಂದಗಾವಿ ಮತ್ತು ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನ ಮಾಡಿದ್ದು, ಸಿಬ್ಬಂದಿಗಳಾದ ಪಿಎಸ್ಐ ಆರ್.ಬಿ.ಸೌದಾಗರ, ಎಎಸ್ಐ ಎ.ಆರ್.ದುಂಡಗಿ, ಕೆ.ಜಿ.ಮುಜಾವರ, ಎಂ.ಜೆ.ಕುರೇರ, ಡಿ.ಸಿ.ಸಾಗರ, ಸಿ.ಐ.ಚಿಗರಿ, ಎಲ್.ಎಂ.ಮುಶಾಪುರೆ, ಎಂ.ಬಂ.ಅಡವಿ ಕಾರ್ಯಾಚರಣೆ ನಡೆಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button