ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ಮಾರ್ಚ್ 20 ಹಾಗೂ 23ರಂದು ವಿವಿಧೆಡೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ತಿಳಿಸಿದೆ.
20ರಂದು ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಡಗಾಂವ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-14 ಆದರ್ಶನಗರ ಪೂರಕದ ಮೇಲೆ ಬರುವ ಸಂಭಾಜಿ ನಗರ, ರಣಜುಂಜರ ಕಾಲಿನಿ, ಕೇಶವ ನಗರ,ಆನಂದ ನಗರ, ಓಂಕಾರ ನಗರ, ಛಬ್ಬಲೇಔಟ್, ಸುಂಕೆ ಲೇಔಟ್, ಭಾಗ್ಯನಗರ ೮ನೇ ಕ್ರಾಸ್‌ದಿಂದ 10ನೇ ಕ್ರಾಸ್‌ವರೆಗೆ, ಆದರ್ಶ ನಗರ, ಪಟ್ವರ್ದನ ಲೇಔಟ್, ಸುಭಾಶ ಮಾರ್ಕೇಟ್, ಆರ್ ಮಾರ್ಗ, ಹಿಂದವಾಡಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮಾರ್ಚ 23 ರಂದು ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ 33/11 ಕೆವಿ ಆರ್ ಎಂ-2 ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಎಫ್-2 ನಾನಾವಾಡಿ ಪೂರಕದ ಮೇಲೆ ಬರುವ ನಾನಾವಾಡಿ, ಆಶ್ರಯವಾಡಿ, ಅಂಗಡಿ ಕಾಲೇಜ, ಆಶ್ರಯ ವಾಡಿ, ಬಲ್ಲಾವಿಸ್ತಾ ಅಪಾರ್ಟಮೆಂಟ್, ಅಂಗಡಿ ಕಾಲೇಜ ರೋಡ್, ಗಿಂಡೇ ಕಾಲೊನಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.