ಪ್ರಗತಿವಾಹಿನಿ ಸುದ್ದಿ, ಕುಂದಗೋಳ:
ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕಾಗಿ ಕುಂದಗೋಳಕ್ಕೆ ತೆರಳಿರುವ
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕುಂದಗೋಳ ತಾಲೂಕಿನ ಮುಳ್ಳಹಳ್ಳಿಯ ಶ್ರೀ ಚನ್ನವೀರ ಮಹಾಸ್ವಾಮಿಗಳ ವೀರಕ್ತಮಠಕ್ಕೆ ಭೇಟಿ ನೀಡಿದ್ದರು.
ಮಠಾಧೀಶರಾದ ಶ್ರೀ ಶಿವಯೋಗಿ ಈಶ್ವರ್ ಮಹಾಸ್ವಾಮಿಗಳು ಮಠದಲ್ಲಿ ಮಳೆನೀರು ಸಂಗ್ರಹಣೆ ಮಾಡುವ ವಿಧಾನವನ್ನು ವೀಕ್ಷಣೆ ಮಾಡಿ ಅದರ ಬಗ್ಗೆ ಶ್ರೀಗಳ ಜೊತೆಗೆ ಚರ್ಚಿಸಿದರು.
ಮಠದಲ್ಲಿ ಒಂದು ಟ್ಯಾಂಕ್ ನಿರ್ಮಿಸಿ ಸುಮಾರು 60 ಸಾವೀರ ಲೀಟರ್ ಮಳೆ ನೀರು ಸಂಗ್ರಹಣೆ ಮಾಡಿದ್ದು ಮಠದಲ್ಲಿ ಕುಡಿಯಲು, ಅಡುಗೆ ಮಾಡಲು ಇದೇ ನೀರನ್ನು ಉಪಯೋಗ ಮಾಡುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಮಹಾಂತೇಶ ಕವಟಗಿಮಠ, ರಾಜ್ಯವು ತೀವ್ರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ರೀತಿಯ ಕಾರ್ಯಗಳನ್ನು ಜನರ ಮುಖ್ಯ ವಾಹಿನಿಗೆ ತಂದು ಮಳೆನೀರು ಪೋಲಾಗದಂತೆ ಅದನ್ನು ಹೇಗೆಲ್ಲಾ ಸಂಗ್ರಹಣೆ ಮಾಡಬೇಕು ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವುದು ಸರ್ಕಾರದ ಕೆಲಸವಾಗಬೇಕು ಹಾಗೂ ಇಂತಹ ಮಳೆ ನೀರು ಕೊಯ್ಲು ಮಾಡಿದ ಶಿವಯೋಗಿ ಈಶ್ವರ್ ಮಹಾಸ್ವಾಮಿಗಳು ನಮಗೆಲ್ಲ ಆದರ್ಶ ಮತ್ತು ಮಾದರಿ ಯಾಗಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ