Latest

ಮೋದಿ ವಿರುದ್ಧ ಟ್ವೀಟ್ ಮಾಡಿ ಉಗಿಸಿಕೊಂಡ ರಮ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :

Home add -Advt

 ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ಟ್ವೀಟ್ ಮಾಡಲು ಹೋಗಿ ಮೈಮೇಲೆ ಇರುವೆ ಬಿಟ್ಟುಕೊಂಡಿದ್ದಾರೆ.

ಪ್ರಧಾನಿ ತಮಾಷೆಗಾಗಿ ಮೋದಿ ಮಕ್ಕಳ ಕಿವಿ ಹಿಂಡುವ ಫೋಟೋವೊಂದನ್ನು ಬಳಸಿ, ಹಿಟ್ಲರ್ ಮಗುವೊಂದರ ಕಿವಿ ಹಿಂಡುತ್ತಿರುವಂತೆ ಎಡಿಟ್ ಮಾಡಿರು ಫೋಟೋಕ್ಕೆ ಹೋಲಿಸಿ ಮೋದಿ ಹಿಟ್ಲರ್ ಎನ್ನುವಂತೆ ಬಿಂಬಿಸಲು ರಮ್ಯ ಪ್ರಯತ್ನಿಸಿದ್ದಾರೆ.

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಮಗುವಿನ ಕಿವಿ ಹಿಂಡುತ್ತಿದ್ದರೆ, ಬಲಬದಿಯಲ್ಲಿ ಮೋದಿ ಅವರು ಕಿವಿ ಹಿಂಡುತ್ತಿದ್ದಾರೆ. ಇದಕ್ಕೆ ಅಡಿಬರಹ ನೀಡಿ, Speaking of Similarities ಎಂದು ರಮ್ಯಾ ಹೇಳಿದ್ದಾರೆ.

ರಮ್ಯ ಟ್ವೀಟ್ ಮಾಡುತ್ತಿದ್ದಂತೆ ಚೌಕಿದಾರರು ಅವರ ಮೇಲೆ ಮುಗಿಬಿದ್ದಿದ್ದಾರೆ. ಸಾವಿರಾರು ಜನ  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.  ರಮ್ಯ ವೋಟ್ ಮಾಡದಿರುವ ಕುರಿತು ಕಿಚಾಯಿಸಿದ್ದಾರೆ. ಮೊದಲು ವೋಟ್ ಮಾಡುವುದನ್ನು ಕಲಿತುಕೋ ನಂತರಟ್ವೀಟ್ ಮಾಡಬಹುದು ಎಂದಿದ್ದಾರೆ. ನಿನಗೆ ಮಾಡಲು ಬೇರೆ ಕೆಲಸ ಇಲ್ಲದಿದ್ದರೆ ನಮ್ಮೂರ ಶಾಲೆಯಲ್ಲಿ ಮುಸುರೆ ತಿಕ್ಕಲು ಬಾ ಎಂದೆಲ್ಲ ಅಸಹ್ಯಕರವಾಗಿ ಉತ್ತರಿಸಿದ್ದಾರೆ. 

ಮೋದಿ ರಾಹುಲ್ ಗಾಂಧಿ ಕಿವಿ ಹಿಂಡುತ್ತಿರುವಂತೆ ತೋರಿಸುವ ಚಿತ್ರ ಹಾಕಿದ್ದಾರೆ. ರಮ್ಯ ಸಿನೇಮಾಗಳ ಹಸಿಬಿಸಿ ಚಿತ್ರಗಳನ್ನು ಹಾಕಿದ್ದಾರೆ. ಕಾಂಗ್ರೆಸ್ ಮುಖಂಡರ ಅಸಹ್ಯ ಚಿತ್ರಗಳನ್ನು ಹಾಕಿದ್ದಾರೆ. 

Related Articles

Back to top button