Latest

ಯೋಗ, ಸಮತೋಲನ ಆಹಾರಗಳಿಂದ ಉತ್ತಮ ಆರೋಗ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಉಪನ್ಯಾಸ ಹಾಗೂ ಸಾಧಕರ ಸನ್ಮಾನ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶೇಷ ಉಪನ್ಯಾಸ ನೀಡಿದ ಡಾ. ವನಿತಾ ಮೆಟಗುಡ್, ಹೆಣ್ಣು ಮಕ್ಕಳಲ್ಲಿ ಉದರ ದರ್ಶಕ ಚಿಕಿತ್ಸೆ ಲ್ಯಾಪ್ರೊಸ್ಕೊಪಿ ಚಿಕಿತ್ಸೆಯಿಂದ ರೋಗಿಗಳಿಗೆ ಆಗುವ ಲಾಭಗಳ ಬಗ್ಗೆ ತಿಳಿಸಿದರು ಮತ್ತು ಉದರ ದರ್ಶಕ ಚಿಕಿತ್ಸೆ ಮೂಲಕ ಬಂಜೆತನಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಸಹಾಯವಾಗಿದೆ ಎಂದರು.
ಡಾ. ಅಂಜಲಿ ಜೋಶಿ ಮಾತನಾಡಿ, ಹೆಣ್ಣು ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆ ಮಾಡದೆ ಇರುವದರಿಂದ ಇತ್ತೀಚಿನ ಹೆಣ್ಣು ಮಕ್ಕಳ ದೈಹಿಕ ಆರೋಗ್ಯದ ಅಸಮತೋಲನ ಹೆಚ್ಚಾಗಿ ರಕ್ತ ಹೀನತೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಯೋಗ, ಸಮತೋಲನ ಆಹಾರ ಸೇವನೆ ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಳಾ ಮೆಟಗುಡ್ ಮಾತನಾಡಿದರು. ಮ.ನ.ರ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಅಧ್ಯಕ್ಷತೆ ವಹಿಸಿದ್ದರು. ಬೋಧಕ, ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸದಸ್ಯರು, ಸಂಘಟಕರು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿದರು. ಶೈಲಜಾ ಬಿಂಗೆ ಸ್ವಾಗತಿಸಿದರು. ಹೇಮಾ ಸೋನಳ್ಳಿ ನಿರೂಪಿಸಿದರು. ವೈ.ಎಂ. ಮೆಣಸಿನಕಾಯಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button