ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮಾ.೧೧ ಮತ್ತು ೧೨ ರಂದು ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಮಹಿಳಾ ಸಬಲೀಕರಣ ಇಲಾಖೆ ವತಿಯಿಂದ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಬೆಳಸುವ ಕುರಿತು ಎರಡು ದಿನಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾ.೧೧ ರಂದು ಬೆ. ೧೧ ಕ್ಕೆ ಆರ್ಸಿಯು ಉದ್ಯಾನವನದಲ್ಲಿ ಫುಡ್ ಫೆಸ್ಟಿವಲ್ ಕಾರ್ಯಕ್ರಮ ಹಾಗೂ ಮಧ್ಯಾಹ್ನ ೩ ಕ್ಕೆ ಕುವೆಂಪು ಸಭಾಂಗಣದಲ್ಲಿ ಉದ್ಯಮಶೀಲತೆ ಕುರಿತು ಕಾರ್ಯಕ್ರಮಗಳು ನಡೆಯಲಿವೆ.
ಮುಖ್ಯ ಅತಿಥಿಗಳಾಗಿ ಲೇಡಿಸ್ ಅಸೋಸಿಯೇಶನ್ ಮ್ಯಾನುಪೆಕ್ಚರ್ ಪಾರ್ಕ್ (ಕೆ-ಲ್ಯಾಂಪ್) ಕಲಬುರ್ಗಿ ಕಾರ್ಯನಿರ್ವಾಹಕಿ ಡಾ. ಸರ್ವಮಂಗಳಾ ಪಾಟೀಲ ಉದ್ಯಮಶೀಲತೆ ಕುರಿತು ಮಾತನಾಡಲಿದ್ದಾರೆ.
ಮಹಿಳಾ ಸಬಲೀಕರಣ ವತಿಯಿಂದ ಫೆ. ೨೩ ರಿಂದ ಪ್ರೋ. ತ್ರಿವೇಣಿ ಸಿಂಗ ಜೊಡೊ ನೇತೃತ್ವದಲ್ಲಿ ಮಹಿಳಾ ಸ್ವ ರಕ್ಷಣಾ ಕಾರ್ಯಕ್ರಮ ನಡೆಯುತ್ತಿದ್ದು ಜೂಡೊ ಪ್ರದರ್ಶಿಸುವುದರೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿಳಲಿದೆ.
ಕಾರ್ಯಾಗಾರದಲ್ಲಿ ಆಹಾರ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗಾಗಿ ಪುಸ್ತಕ, ಬಟ್ಟೆ, ಇನ್ನಿತರ ವ್ಯಾಪಾರ ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗಿದೆ.
ಆರ್ಸಿಯು ಕುಲಪತಿ ಪ್ರೊ. ಶಿವಾನಂದ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ. ಸಿದ್ದು ಅಲಗೂರ, ಮೌಲ್ಯ ಮಾಪನ ಕುಲಸಚಿವ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಾ.೧೨ ಬೆಳಿಗ್ಗೆ ೧೧ ಕ್ಕೆ ವಿಶ್ವ ಮಹಿಳಾ ದಿನಾಚರಣೆ ವಿವಿಧ ಕಾರ್ಯಕ್ರಮಗಳು ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆಯಲಿವೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ನಿವೃತ್ತಿ ಹೊಂದುತ್ತಿರುವ ಪ್ರೊ. ಮುಕ್ತಾ ಅವರಿಗೆ ಬಿಳ್ಕೊಡುಗೆ ಕಾರ್ಯಕ್ರಮವು ನಡೆಯಲಿದೆ ಎಂದು ಮನಿಷಾ ನೇಸರಕರ ಹಾಗೂ ಪೂಜಾ ಹಳಿಯಾಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ