Video Player
00:00
00:00
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುವ ವೇಳೆ ಸ್ಪೀಕರ್ ರಮೇಶ ಕುಮಾರ ಅತ್ಯಾಚಾರ ಕುರಿತು ಆಡಿರುವ ಮಾತುಗಳನ್ನು ಕಡತದಿಂದ ತೆಗೆದುಹಾಕುವಂತೆ ಶಾಸಕಿ ಅಂಜಲಿ ನಿಂಬಾಳಕರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸ್ಪೀಕರ್ ಗೆ ಪತ್ರ ಬರೆದಿರುವ ಅಂಜಲಿ, ತಮ್ಮ ಮಾತುಗಳಿಂದ ಮಹಿಳೆಯರ ಭಾವನೆಗಳಿಗೆ ಘಾಸಿಯಾಗಿದೆ. ಹಲವಾರು ಮಹಿಳೆಯರು ನನ್ನ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಹಿರಿಯರಿದ್ದೀರಿ. ತಮ್ಮ ನಡವಳಿಕೆ, ವ್ಯಕ್ತಿತ್ವ, ನುಡಿಗಳು ಮತ್ತು ಸದನವನ್ನು ನಡೆಸುವ ರೀತಿ ನನ್ನಂತ ಹಲವಾರು ಯುವ ಸದಸ್ಯರಿಗೆ ಆದರ್ಶ ಮತ್ತು ಪ್ರೇರಣಾದಾಯಕವಾಗಿದೆ. ಮಹಿಳೆಯರ ಬಗ್ಗೆ ಅಪಾರ ಗೌರವ ಹೊದಿರುವ ತಾವು ಸದನದಲ್ಲಿ ಅತ್ಯಾಚಾರದ ಬಗ್ಗೆ ಪ್ರಸ್ತಾಪಿಸಿರುವ ಮಾತುಗಳನ್ನು ಸದನದ ನಡಾವಳಿಯಿಂದ ತೆಗೆದುಹಾಕಬೇಕೆಂದು ವಿನಂತಿ ಎಂದು ಕೋರಿದ್ದಾರೆ.