Latest

ರೋಟರಿ ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಅಭಿವೃದ್ಧಿಯತ್ತ ಸಾಗುವ ಬದಲು ವಿರುದ್ಧ ದಿಕ್ಕಿನಲ್ಲಿ ಹೋಗುವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇದನ್ನು ತಪ್ಪಿಸಲು ರೋಟರಿಯಂತಹ ಸಂಘ ಸಂಸ್ಥೆಗಳು ನೇತೃತ್ವ ವಹಿಸಿಕೊಳ್ಳಬೇಕು ಎಂದು ಹೊಟೆಲ್ ಉದ್ಯಮಿ ವಿಠ್ಠಲ ಹೆಗಡೆ ಸಲಹೆ ನೀಡಿದ್ದಾರೆ.

ರೋಟರಿ ಇ ಕ್ಲಬ್ ನೀಡಿದ ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಸ್ವೀಕರಿಸಿ ಅರು ಮಾತನಾಡುತ್ತಿದ್ದರು. ಬೆಳಗಾವಿಯನ್ನು ಅಭಿವೃದ್ಧಿ ಪಡಿಸಲು ಸರಕಾರಕ್ಕೆ ಆಸಕ್ತಿ ಇಲ್ಲ. ಇಲ್ಲಿನ ರಾಜಕಾರಣಿಗಳೂ ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪತ್ರಕರ್ತ ಎಂ.ಕೆ.ಹೆಗಡೆ ಮತ್ತು ಕೆಲವರು ಸೇರಿ ವಿಟಿಯು ಉಳಿಸಲು ಹೋರಾಟ ನಡೆಸಿದರು. ಅದೇ ರೀತಿ ಸಂಘ ಸಂಸ್ಥೆಗಳು ಬೆಳಗಾವಿ ಅಭಿವೃದ್ಧಿಯತ್ತ ಸಾಗಲು ನೇತೃತ್ವ ವಹಿಸುವ ಜೊತೆಗೆ ಮಾರ್ಗದರ್ಶ ನೀಡಬೇಕು ಎಂದು ಅವರು ಹೇಳಿದರು.

ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಅವರಿಗೆ ಸಹ ಅವರ ವೃತ್ತಿ ಹಾಗೂ ಸಾಮಾಜಿಕ ಸೇವೆಗಾಗಿ ರೋಟರಿ ಸಂಸ್ಥೆ ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಿತು.

ರೋಟರಿ ಇ ಕ್ಲಬ್ ಅಧ್ಯಕ್ಷೆ ರೇಣು ಕುಲಕರ್ಣಿ, ಪದಾಧಿಕಾರಿಗಳಾದ ಡಾ.ಆನಂದ ದೇಶಪಾಂಡೆ, ಡಾ.ಅನಿಲ ಪಾಟೀಲ, ನರಸಿಂಹ ಜೋಶಿ, ಡಾ.ಪ್ರಮೋದ ಹನಮಗೊಂಡ, ಡಾ.ಸಮೀರ್ ಸರ್ನೋಬತ್, ಪ್ರಕಾಶ ಪಡ್ನಿಸ್, ನಾಗತಿಲಕ್ ಗಣಿಕೊಪ್, ಪ್ರವೀಣ ಗಾಲಿ, ಜ್ಯೋತಿ ಮಠದ, ಅನಂತ ನಾಡಗೌಡ ಮೊದಲಾದವರಿದ್ದರು.

ಪುಣೆಯಿಂದ ಸಹ ರೋಟರಿ ಇ ಕ್ಲಬ್ ಪದಾಧಿಕಾರಿಗಳು ಆಗಮಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button