ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಾಗವಾಡದ ಶಿವಾನಂದ ಕಾಲೇಜಿನಲ್ಲಿ ನಡೆದ ಅಂತಾರಾಜ್ಯ ವಾಣಿಜ್ಯ ಉತ್ಸವ “Power of – 50” ಕಾರ್ಯಕ್ರಮದಲ್ಲಿ ನಗರದ ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ. ಆನಂದ ಎಲ್ಜಿ, ಶ್ರೀಹರಿ ಕುಲಕರ್ಣಿ ಮಾರುಕಟ್ಟೆ ವಿಭಾಗದಲ್ಲಿ ಪ್ರಥಮ, ದರ್ಶನಾ ಬಾಂದೇಕರ, ಶ್ರೇಷ್ಠಾ ಪೇಪರ್ಪ್ರಸೆಂಟೇಶನ್‌ನಲ್ಲಿ ಪ್ರಥಮ, ಅರಬಾಜಖಾನ ಶಿಲೇದಾರ ಹಾಗೂ ತಂಡದ ರಶ್ಮಿ, ಪ್ರಸನ್,ಮುಸದ್ದಿಶ್, ತಬಸ್ಸುಮ್, ಪವನಕುಮಾರ ಗುಂಪು ನೃತ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಚೇರಮನ್ ವಿ.ಎಂ. ದೇಶಪಾಂಡೆ, ಪ್ರಾಚಾರ್ಯ ಡಾ. ಎಚ್.ಎಚ್. ವೀರಾಪೂರ, ಸಂಯೋಜಕ ಪ್ರೊ. ಎಸ್.ಬಿ. ಬೆಂಡಿಗೇರಿ ಹಾಗೂ ಅಧ್ಯಾಪಕರು ಅಭಿನಂದಿಸಿದ್ದಾರೆ. ಸಂತೋಷ ನಾವಗೇಕರ ತಂಡದ ಮುಂದಾಳತ್ವ ವಹಿಸಿದ್ದರು.