Latest

ವಾಹನ ಕಳ್ಳರ ಬಂಧನ: ಹಲವು ವಾಹನ ವಶ

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸಂಶಯುಕ್ತ ವಾಹನ ಚಾಲಕನ ವಶಕ್ಕೆ ಪಡೆದ ಮಾರಿಹಾಳ ಪೊಲೀಸರು, ಉದ್ಯಮಬಾಗ ಠಾಣೆಯ 4 ವಾಹನ ಸೇರಿ ಒಟ್ಟೂ 2.93 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಲಕ ಆರೋಪಿ ಉದ್ಯಮಬಾಗದ ಮಾರುತಿ @ ಮಾರ‍್ಯಾ @ ಕರಿಮ ತಂದೆ ಹುಲೆಪ್ಪ ಕರಿಕಾಳ ಈತ ಗೋಕಾಕ ರಸ್ತೆ ಕಬಲಾಪೂರ ಕ್ರಾಸ ಹತ್ತಿರ ಮಹಿಂದ್ರಾ ಪಿಕಪ್ ವ್ಯಾನಲ್ಲಿ ಬರುವಾಗ ವಾಹನಗಳ ಪರಿಶೀಲನಾ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಡೆದು ಪರಿಶೀಲಿಸಿದರು. ಆತನನ್ನು ವಶಕ್ಕೆ ಪಡೆದು ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ ತನ್ನ ಜೊತೆಗೆ ಬಸಪ್ಪ @ ವಾಂಡ ಬಸ್ಯಾ ತಂದೆ ಹುಲೆಪ್ಪ ಕರಿಕಾಳ, ರಾಮ ಹುಲೆಪ್ಪ ಕರಿಕಾಳ, ಬಸಪ್ಪ @ ಪರಾರಿ ಬಸ್ಯಾ ತಂದೆ ಮಾರುತಿ ಕರಿಕಾಳ, ಹಣಮಂತ ಹಟ್ಟಿ, ಸಾಗರ ಶಂಕರ ದಾಮನೆಕರ ಎಲ್ಲರೂ ಸೇರಿ ಉದ್ಯಮಬಾಗ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ಕಳುವು ಮಾಡಿದ್ದಾಗಿ ತಿಳಿಸಿದ.

ಮಹಿಂದ್ರಾ ಕಂಪನಿಯ ಪಿಕಪ್ ವಾಹನ, ಹೊಸದಾದ ಹಿರೋ ಸ್ಪ್ಲೆಂಡರ್ ಪ್ಲಸ್, ಹೊಸದಾದ ಹಿರೋ ಸ್ಪ್ಲೆಂಡರ್ ಪ್ಲಸ್, ಹಿರೋ ಸ್ಪ್ಲೆಂಡರ್ ಪ್ಲಸ್, ಹಿತ್ತಾಳೆಯ ಗನ್ ಬೊರಿಂಗ್ ಮೆಟಲ್ ಪೌಡರ ತುಂಬಿದ ಚೀಲ, ಅಲ್ಯುಮಿನಿಯಂ ತುಂಬಿದ ಚೀಲಗಳು, ಸುಮಾರು ೧೦ ಮೀಟರ್ ಉದ್ದ ಇದ್ದ ನಾಲ್ಕು ಎಳೆಯ ಕೇಬಲ ವಾಯರ್, ಖಾಲಿ ಸಿಲೆಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲ ಆರೋಪಿತರು ಸೇರಿ ಕಳುವು ಮಾಡಿದ ಒಟ್ಟು 2,95,500 ರೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯಕುಮಾರ ಎನ್. ಸಿನ್ನೂರ, ಪೊಲೀಸ್ ಇನ್ಸಪೆಕ್ಟರ್ ಮಾರಿಹಾಳ ಪೊಲೀಸ ಠಾಣೆ ನೆತೃತ್ವದಲ್ಲಿ, ಎಸ್ ಎಸ್ ಕಂಬಿ ಪಿಎಸ್‌ಐ ಹಾಗೂ ಪಿ ಕೆ ಪರಸನ್ನವರ ಎಎಸ್‌ಐ, ಬಿ ಎಸ್ ನಾಯಕ, ಬಿ ಬಿ ಕಡ್ಡಿ, ಎ ಎಮ್ ಜಮಖಂಡಿ, ಎಚ್ ಎಲ್ ಯರಗುದ್ರಿ, ಎಮ್ ಆರ್ ಸುಲದಾಳ, ಎಸ್ ಎಸ್ ಪಾಟೀಲ, ಎಮ್ ಎಸ್ ಹೂಗಾರ, ಎಮ್ ಎಸ್ ಹೀರೆಮಠ,ಎಸ್ ಎಸ್ ಬಿಲ್ ಕಾರ್ಯಾಚರಣೆ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button