ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಫ್ಯಾಮಿಲಿ ಪ್ಲ್ಯಾನಿಂಗ ಅಸೋಸಿಯೆಶನ್ ಆಫ್ ಇಂಡಿಯಾ ಶಾಖೆಯಲ್ಲಿ ವಿಶ್ವ ಸುರಕ್ಷಿತ ತಾಯ್ತನ ದಿನ ಆಚರಿಸಲಾಯಿತು.
ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಶಾಖೆಯ ಉಪಾಧ್ಯಕ್ಷೆ ಶೋಭಾ ಎಸ್. ಕುಲಕರ್ಣಿ, ದೇಶಾದ್ಯಂತ ವಿಶ್ವ ಸುರಕ್ಷಿತ ತಾಯ್ತನ ದಿನ ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಷಯ. ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಸ್ತ್ರೀರೋಗ ತಜ್ಞೆ ಡಾ. ವೈಶಾಲಿ ಕಿತ್ತೂರ ಮಾತನಾಡಿ, ಕುಟುಂಬ ಬೆಳೆಸುವುದು ತಾಯಿಯ ಜವಾಬ್ದಾರಿ. ಹೆಣ್ಣು ಮಕ್ಕಳು ಸದೃಢವಾಗಿರಬೇಕಾದರೆ ಅವರಿಗೆ ಪೌಷ್ಟಿಕ ಆಹಾರ ಹಾಗೂ ಉತ್ತಮ ಸಂಸ್ಕಾರಗಳನ್ನು ನೀಡಬೇಕು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಎಫ್‌ಪಿಎಐ ಬೆಳಗಾವಿ ಶಾಖೆಯ ವೈದ್ಯಾಧಿಕಾರಿ ಡಾ. ಆರತಿ ಕುಲಕರ್ಣಿ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ವೈದ್ಯಾಧಿಕಾರಿ ಡಾ. ನಮ್ರತಾ ಮಿಸಾಳೆ ಸುರಕ್ಷಿತ ತಾಯ್ತನದ ಮಹತ್ವ ತಿಳಿಸಿದರು. ಕೃಷ್ಣಾ ಗುಮಾಸ್ತೆ ಸ್ವಾಗತಿಸಿದರು. ಶಾಖೆಯ ಸಿಬ್ಬಂದಿ ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ