ಪ್ರಗತಿವಾಹಿನಿ ಎಕ್ಸಕ್ಲೂಸಿವ್
ಎಂ.ಕೆ.ಹೆಗಡೆ, ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಚಿವ ಸಂಪುಟದಿಂದ ಕೈ ಬಿಡಲ್ಪಟ್ಟಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ನಾನು 3 ತಿಂಗಳ ಹಿಂದೆಯೇ ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದರು.
ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದೇನೆ. ಇಂದು ಸಂಜೆಯೇ ಆಗಬಹುದು, ಇನ್ನೊಂದು ವಾರವೂ ಆಗಬಹುದು ಎಂದು ಅವರು ತಿಳಿಸಿದರು.
ನನ್ನೊಂದಿಗೆ ಯರ್ಯಾರು ರಾಜಿನಾಮೆ ಸಲ್ಲಿಸಲಿದ್ದಾರೆ? ನಮ್ಮ ಮುಂದಿನ ಯೋಜನೆ ಏನು ಎನ್ನುವುದನ್ನೆಲ್ಲ ಶೀಘ್ರವೇ ಬಹಿರಂಗಪಡಿಸಲಿದ್ದೇನೆ. ನನ್ನ ಮುಂದಿನ ಹೆಜ್ಜೆ ಏನೇ ಇದ್ದರೂ ನನ್ನ ನಿರ್ಧಾರದಿಂದ ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಅವರು ತಿಳಿಸಿದರು.
ನಾನು ಯಾರನ್ನು ನಂಬಿ ಇಷ್ಟು ದಿನ ಕಾಯಬೇಕಾಯಿತು ಎನ್ನುವುದನ್ನೂ ಬಹಿರಂಗಪಡಿಸುತ್ತೇನೆ. ನನ್ನ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ. ನನಗೆ ಗೊತ್ತಿದೆ. ಆದರೆ ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಮೇಶ ತಿಳಿಸಿದರು.
ಶನಿವಾರವಷ್ಟೆ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸಮ್ಮಿಶ್ರ ಸರಕಾರದ ಸಚಿವ ಸಂಪುಟದಿಂದ ಕೈಬಿಟ್ಟು ಅವರ ಸಹೋದರ ಸತೀಶನ ಜಾರಕಿಹೊಳಿ ಅವರನ್ನು ಸೇರಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ