Latest

ಶಿಕ್ಷಣ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಡೆಗಣಿಸುತ್ತಿವೆ: ಅಭಯ ಪಾಟೀಲ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಂದು ಶಿಕ್ಷಣ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಗಳನ್ನು ಕಡೆಗಣಿಸುತ್ತಿದ್ದು, ಹೇಗೆ ಹಣಗಳಿಸಿಕೊಡಬೇಕೆಂಬುದನ್ನು ಕಲಿಸುವ ಸಂಸ್ಥೆಗಳಾಗಿವೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ಅಮೃತ ವಿದ್ಯಾಲಯಂ ದ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಸಾಹಿತ್ಯ, ಸಂಗೀತ, ಕ್ರೀಡೆಗಳಿಂದ ಮನುಷ್ಯ ಕ್ರಿಯಾಶೀಲನಾಗಿರುತ್ತಾನೆ. ಗುರು ಹಿರಿಯರನ್ನು ಪ್ರೀತಿಸಬೇಕು, ರಾಷ್ಟ್ರವನ್ನು ಗೌರವಿಸಬೇಕೆಂಬ ನೈತಿಕ ಶಿಕ್ಷಣವಿಂದು ಮರೆಯಾಗುತ್ತಿದೆ ಎಂದು ಅವರು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಚಾರ್ಟರ್ಡ್ ಅಕೌಂಟಂಟ್ ಎಸ್. ಎನ್. ಶಿವಣಗಿ, ಶಾಲಾ ಆಡಳಿತಾಧಿಕಾರಿ ಪ್ರೊ. ಜಿ .ಕೆ. ಕುಲಕರ್ಣಿ ಮಾತನಾಡಿದರು.
ಪ್ರಾಂಶುಪಾಲರಾದ ಸುಷ್ಮಾ ಚರಂತಿಮಠ ವಾರ್ಷಿಕ ವರದಿವಾಚನ ಮಾಡಿದರು. ಡಾ. ಸುರೇಶನ್ ಮೋತೆದಾರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button