Latest

ಸಂಚಾರಿ ಪಡಿತರ ಧಾನ್ಯ ವಿತರಣೆಗೆ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಖಾನಾಪೂರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ತಳೇವಾಡಿ ಮತ್ತು ದೇವಾಂಗ ಗ್ರಾಮಗಳಿಗೆ ಸಂಚಾರಿ ಪಡಿತರ ಧಾನ್ಯ ವಿತರಣೆ ವ್ಯವಸ್ಥೆ ಮಾಡುವಂತೆ ಖಾನಾಪುರ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಭೀಮಗಡ ಅಭಯಾರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ತಳೇವಾಡಿ ಮತ್ತು ದೇವಾಂಗ ಗ್ರಾಮಗಳಿಗೆ ಸಂಚಾರಿ ಪಡಿತರ ಧಾನ್ಯ ವಿತರಣೆ ವ್ಯವಸ್ಥೆ ಮಾಡುವಂತೆ ಭಾರತೀಯ ಕೃಷಿಕ ಸಮಾಜ (ಸಂಯುಕ್ತದ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ, ಈ ಆದೇಶ ಹೊರಡಿಸಿದ್ದಾರೆ.
ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ತಳೇವಾಡಿ ಮತ್ತು ದೇವಾಂಗ ಗ್ರಾಮದ ಜನರು ಪಡಿತರ ಧಾನ್ಯಗಳನ್ನು ಪಡೆಯಲು ಸುಮಾರು 8 ಕಿ.ಮೀ. ದೂರದಲ್ಲಿರುವ ಹೆಮ್ಮಡಗಾ ಗ್ರಾಮಕ್ಕೆ ನಡೆದುಕೊಂಡು ಹೋಗಿ ಆಹಾರ ಧಾನ್ಯಗಳನ್ನು ಪಡೆಯಬೇಕಾಗುತಿತ್ತು. ಆ ಮಾರ್ಗದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದರಿಂದ ಪ್ರತಿ ತಿಂಗಳು ಆ ಗ್ರಾಮಗಳ ಜನರು ಪರದಾಡಬೇಕಾಗುತಿತ್ತು.
ಈ ಸಮಸ್ಯೆಯನ್ನು ಪರಿಹರಿಸುವ ಸಲುವಗಿ ಆ ಗ್ರಾಮಗಳಿಗೆ ಸಂಚಾರಿ ಪಡಿತರ ವಾಹನ ಮೂಲಕ ಆಹಾರ ಧಾನ್ಯ ಸರಬರಾಜು ಮಾಡಬೇಕು ಎಂದು ಸಲ್ಲಿಸಲಾಗಿದ್ದ ಮನವಿಯನ್ನು ಪರಿಗಣಿಸಿರುವ ತಹಶೀಲ್ದಾರರು ಆ ಗ್ರಾಮಗಳಿಗೆ ಸಂಚಾರಿ ವಾಹನದ ಮೂಲಕ ಪಡಿತರ ಆಹಾರ ಧಾನ್ಯ ಸರಬರಾಜು ಮಾಡುವಂತೆ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಮಾರಾಟ ಸಂಘದ ವ್ಯವಸ್ಥಾಪಕರಿಗೆ ಆದೇಶಿಸಿದ್ದಾರೆ.
ತಹಶೀಲ್ದಾರರ ಆದೇಶವನ್ನು ಸ್ವಾಗತಿಸಿರುವ ಸಿದಗೌಡ ಮೋದಗಿ ಅವರು, ತಹಶೀಲ್ದಾರರಿಗೆ ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button