Latest

ಸಾಗರ: ಮಂಗನ ಕಾಯಿಲೆಗೆ 6 ಬಲಿ

 

   ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆ ತೀವ್ರವಾಗಿ ಹರಡುತ್ತಿದ್ದು, ಸಾವಿಗೀಡಾದವರ ಸಂಖ್ಯೆ 6ಕ್ಕೆ ಏರಿದೆ.

ಸಾಗರ ತಾಲೂಕಿನಲ್ಲಿ 6 ಜನರು ಮಂಗನಕಾಯಿಲೆಗೆ (ಕ್ಯಾಸನೂರು ಕಾಯಿಲೆ) ಬಲಿಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಸಾಗರ ತಾಲೂಕಿನ ಅರಳಗೋಡು ಗ್ರಾಮದ 18 ವರ್ಷದ ಯುವತಿ ಶ್ವೇತಾ (18) ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಶ್ವೇತಾ ಚಿಕಿತ್ಸೆ ಪಡೆಯುತ್ತಿದ್ದರು.  ಸಾಗರದ ಅರಳಗೋಡು ಗ್ರಾಮದಲ್ಲಿ ಪಾರ್ಶ್ವನಾಥ ಜೈನ್, ವಾಟೆಮಕ್ಕಿಯ ಕೃಷ್ಣಪ್ಪ, ಮಂಜುನಾಥ್, ಲೋಕರಾಜ್ ಜೈನ್, ರಾಮವ್ವ ಮೃತಪಟ್ಟಿದ್ದಾರೆ. ಸುತ್ತಮುತ್ತ 25ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿದ್ದಾಗಿ ಗೊತ್ತಾಗಿದೆ. 

ಸರಿಯಾಗಿ ಲಸಿಕೆ ಹಾಕದಿರುವುದು ಮತ್ತು ರೋಗ ದೃಢಪಡಲು ವಿಳಂಬವಾಗುತ್ತಿರುವುದು ಕಾಯಿಲೆ ತೀವ್ರತರವಾಗಿ ಹರಡಲು ಕಾರಣವಾಗಿದೆ. 6 ದಶಕಗಳಿಂದ ಕಾಡುತ್ತಿರುವ ಮಂಗನ ಕಾಯಿಲೆ ಕಳೆದ 2 ದಶಗಳಿಂದ ನಿಯಂತ್ರಣಕ್ಕೆ ಬಂದಿತ್ತು. ಹಾಗಾಗಿ ಲಸಿಕೆ ನಿರ್ಲಕ್ಷಿಸಲಾಗಿತ್ತು. 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button