ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಸಿಎಂ ಸ್ಥಾನದ ಆಕಾಂಕ್ಷೆಗೆ ಸಂಬಂಧಿಸಿದಂತೆ ದೋಸ್ತಿ ಪಕ್ಷಗಳ ಮಧ್ಯೆ ಮಾತಿನ ಸಮರ ಜೋರಾಗುತ್ತಿದೆ. ಇದರ ಮಧ್ಯೆಯೇ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ಮಧ್ಯೆ ಟ್ವೀಟ್ ಸಮರ ನಡೆದಿದೆ.
ಮಲ್ಲಿಕಾರ್ಜುನ ಖರ್ಗೆ ಎಂದೋ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಕುಮಾರಸ್ವಾಮಿ ನಿನ್ನೆ ಚಿಂಚೋಳಿಯಲ್ಲಿ ಹೇಳಿದ್ದರು.
ಇದಕ್ಕೆ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಸಿಎಂ ಆಗುವ ಅರ್ಹತೆ ಇರುವವರು ಸಾಕಷ್ಟು ಜನರಿದ್ದಾರೆ. ಎಚ್.ಡಿ.ರೇವಣ್ಣ ಕೂಡ ಅರ್ಹರು ಎಂದು ಕುಮಾರಸ್ವಾಮಿಯನ್ನು ಕೆಣಕಿದ್ದಾರೆ.
ಇದಕ್ಕೆ ಪ್ರತಿಟ್ವೀಟ್ ಮಾಡಿರುವ ಸಿಎಂ, ನನ್ನ ಹೇಳಿಕೆಗೆ ರಾಜಕೀಯ ಬಣ್ಣ ಕಟ್ಟುವುದು ಬೇಡ. ಖರ್ಗೆ ಒಬ್ಬ ಮಹೋನ್ನತ ವ್ಯಕ್ತಿಯಾಗಿದ್ದರಿಂದ ನನ್ನ ಮನದಾಳದ ಮಾತನ್ನು ಹೇಳಿದ್ದೇನೆ ಎಂದಿದ್ದಾರೆ.