Latest

ಸುಣದೋಳಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ  

ಪ್ರಗತಿವಾಹಿನಿ ಸುದ್ದಿ, ಮೂಡಲಗಿ :
 ಮತಗಟ್ಟೆಗಳನ್ನು ಸ್ಥಳಾಂತರಿಸದೆ ಇದ್ದಲ್ಲಿ ಚುನಾವಣೆಗೆ ಬಹಿಷ್ಕಾರ ಹಾಕುವುದಾಗಿ ಸುಣದೋಳಿ ಗ್ರಾಮಸ್ಥರು ನಿರ್ಣಯಿಸಿದ್ದಾಗಿ ತಿಳಿದು ಬಂದಿದೆ.
  ಮೂಡಲಗಿ ತಾಲೂಕಿನ ಸುಣದೋಳಿಯ ಶ್ರೀ ಜಡಿಸಿದ್ದೇಶ್ವರ ರಥೋತ್ಸವ ಮತ್ತು ಲೋಕಸಭಾ ಚುನಾವಣೆಗೆ ಮತದಾನ ಒಂದೇ ದಿನ ಏ.23ರಂದು ಇರುವುದರಿಂದ ಜಾತ್ರೆಗೆ ತೊಂದರೆ ಆಗುತ್ತದೆ. ಕಾರಣ ಮಠದ ಹತ್ತಿರವೆ ಇರುವ ಸರಕಾರಿ ಶಾಲೆಯಲ್ಲಿರುವ ಮೂರು ಮತಗಟ್ಟೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಈ ವಿಷಯವಾಗಿ ಪರಿಶೀಲನೆ ಮಾಡಲು ರವಿವಾರ ಮೂಡಲಗಿ ತಹಶೀಲ್ದಾರ ಮುರಳಿಧರ ತಳ್ಳಿಕೇರಿ ಮತ್ತು ಅರಬಾಂವಿ ಕ್ಷೇತ್ರ ಚುನಾವಣೆ ಸಹಾಯಕ ಅಧಿಕಾರಿ ವೆಂಕಟಸ್ವಾಮಿ ಗ್ರಾಮಕ್ಕೆ ಆಗಮಿಸಿದ್ದರು. ಕೇಂದ್ರ ಚುನಾವಣೆ ಅಯೋಗ ಈಗಾಗಲೆ ಮತಗಟ್ಟೆ ಸ್ಥಳ ನಿಗದಿಪಡಿಸಲಾಗಿದೆ. ಒಂದು ವೇಳೆ ಆಯೋಗ ಪರವಾನಿಗೆ ನೀಡಿದರೆ ಮತಗಟ್ಟೆ ಸ್ಥಳಂತರಿಸಲಾಗುವುದು. ಇಲ್ಲದಿದ್ದಲ್ಲಿ ನಿಗದಿತ ಸ್ಥಳದಲ್ಲಿಯೇ ಚುನವಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ನಮ್ಮ ಮನವಿಗೆ ಸ್ಫಂದಿಸದೆ ಇದ್ದಲ್ಲಿ ಗ್ರಾಮದ 3,500 ಮತದಾರರು ಚುನಾವಣೆ ಬಹಿಷ್ಕರಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
  ಈ ಸಮಯದಲ್ಲಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಗಣ್ಯರಾದ ಸಿ.ಎಸ್.ವಾಲಿ, ಪಿ.ಎ.ಗಾಣಿಗೇರ, ಬಿ.ಬಿಹೊಟ್ಟಿಹೊಳಿ, ಶಿವಕುಮಾರ ಅಂಗಡಿ, ದುಂಡಪ್ಪ ಚೌಗಲಾ, ಮಾಯಪ್ಪ ಡವಳೇಶ್ವರ, ಶಂಕರ ಕರಾಳೆ, ಮಹಾದೇವ ಹೊರಟ್ಟಿ, ಬಸು ಪಾಶಿ, ಸಿದ್ದಾರೂಢ ಕಮತೆ, ಮಾಹಲಿಂಗಯ್ಯಾ ಹಿರೇಮಠ, ಶಂಬುಲಿಂಗ ಮಾದರ ಮುಂತಾದವರು ಹಾಜರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button