ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿಸಿ ಶಾಸಕ ಅಭಯ ಪಾಟೀಲ ಸಹಿ ಅಭಿಯಾನ ಆರಂಭಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಶಾಸಕರ ಸಹಿ ಅಭಿಯಾನ ಆರಂಭಿಸಿರುವ ಅವರು, ಈವರೆಗೆ 23 ಶಾಸಕರ ಸಹಿ ಪಡೆದಿದ್ದಾರೆ.
ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು
ಸಹಿ ಅಭಿಯಾನ ಮುಂದುವರಿಸಿರುವ ಅವರು ಮಂಗಳವಾರ ಮತ್ತಷ್ಟು ಶಾಸಕರ ಸಹಿ ಪಡೆಯಲಿದ್ದಾರೆ. ಉತ್ತರ ಕರ್ನಾಟಕದ ಶಾಸಕರಷ್ಟೆ ಅಲ್ಲದೆ ದಕ್ಷಿಣ ಕರ್ನಾಟಕದ ಅನೇಕ ಶಾಸಕರು ಕೂಡ ಅಭಿಯಾನ ಬೆಂಬಲಿಸಿ ಸಹಿ ಹಾಕಿದ್ದಾರೆ. ಮಂಗಳವಾರ ಕೂಡ ಸಹಿ ಅಭಿಯಾನ ಮುಂದುವರಿಸಲಿರುವ ಅಭಯ ಪಾಟೀಲ, ದಕ್ಷಿಣ ಕರ್ನಾಟಕದಿಂದಲೂ ಅನೇಕ ಶಾಸಕರ ಸಹಿ ಪಡೆಯುವ ವಿಶ್ವಾಸ ಹೊಂದಿದ್ದಾರೆ.
ವಿಟಿಯು ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ
ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಶಾಸಕರ ಸಹಿ ಪಡೆದು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಅಲ್ಲದೆ ಮಂಗಳವಾರ ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದರು.