Latest

ಸೋಲಿನಿಂದ ಎದೆಗುಂದಬೇಡಿ ಎಂದ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಲೋಕಸಭಾ ಚುನಾವಣೆ ಫಲಿತಾಂಶ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸೋಲಿನಿಂದ ಎದೆಗುಂದದಂತೆ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಆಯ್ಕೆಯಾದ ಸಂಸದರಿಗೆ ಶುಭಾಷಯ ಕೋರಿರುವ ಅವರು, ಮುಂದಿನ 5 ವರ್ಷ ಉತ್ತಮ ಆಡಳಿತ ನೀಡುವಂತೆ ಕೋರಿದ್ದಾರೆ.

Home add -Advt

ಈ ಫಲಿತಾಂಶ ಅನಿರೀಕ್ಷಿತವಾದದ್ದು ಎಂದಿರುವ ಅವರು, ಇದರಿಂದ ಎದೆಗುಂದದೆ, ಪಕ್ಷವನ್ನು ಪುನರ್ ಸಂಘಟಿಸಲು ಚರ್ಚಿಸೋಣ ಎಂದಿದ್ದಾರೆ.

ಸೋಲಿನ ಕುರಿತು ಎಲ್ಲ ಕಾರ್ಯಕರ್ತರು, ಹಿರಿಯರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕುಮಾರಸ್ವಾಮಿ ಸಚಿವಸಂಪುಟದ ಅನೌಪಚಾರಿಕ ಸಭೆ ಕರೆದಿದ್ದಾರೆ. ಸಂಜೆ 4 ಗಂಟೆಗೆ ಜಡಿಎಸ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. 

Related Articles

Back to top button