ಪಿಕ್‌ನಿಕ್ ಪಝಲ್ ಕಾರ್ಯಕ್ರಮದಲ್ಲಿ ಬಿಇಓ ಪಾರ್ವತಿ ವಸ್ತ್ರದ ಅಭಿಪ್ರಾಯ
ಪ್ರಗತಿವಾಹಿನಿ ಸುದ್ದಿ, ದೊಡವಾಡ
ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಜತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಸ್ತಿತ್ವಕ್ಕಾಗಿ ಹೋರಾಟ ಮಾಡಲೇಬೇಕಾದ ಅನಿರ್ವಾತೆ ಇದೆ ಎಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಹೇಳಿದರು.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಹಾಗೂ ಎಸ್‌ವಿಜಿ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಉಡಕೇರಿ, ಮೂಗಬಸವ, ದೊಡವಾಡ, ಚಿಕ್ಕಬೆಳ್ಳಿಕಟ್ಟಿ,ಗೋವನಕೊಪ್ಪ ಹಾಗೂ ಬುಡರಕಟ್ಟಿ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಲಾಗಿದ್ದ ಪಿಕ್‌ನಿಕ್ ಪಝಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಎನ್ನುವುದು ಉತ್ತಮ ಜೀವನಕ್ಕೆ ಮಹತ್ತರ ಬದಲಾವಣೆ ನೀಡುವ ಪ್ರಮುಖ ಘಟ್ಟ ಹೀಗಾಗಿ ವಿದ್ಯಾರ್ಥಿಗಳು ನಿಶ್ಚಿತ ಗುರಿ ಇಟ್ಟಕೊಂಡು ಅಗತ್ಯ ಮಾರ್ಗದರ್ಶನ, ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ತಾನಾಗಿಯೇ ಬೆನ್ನ ಹಿಂದೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚಿಕ್ಕಬೆಳ್ಳಿಕಟ್ಟಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಯು ಎಲ್ ಕರ್ಚಗಟ್ಟಿ ಮಕ್ಕಳಿಗೆ ತಮ್ಮ ಸ್ವ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು. ಯಾವುದೇ ಅಳುಕು ಆತಂಕಗಳಿಲ್ಲದೆ ಪರೀಕ್ಷೆ ಎದುರಿಸಬೇಕು ಎಂದು ತಿಳಿಸಿದರು.
ಅಕ್ಷರ ದಾಸೋಹ ಅಧಿಕಾರಿ ಶ್ರೀದೇವಿ ನಾಗನೂರ ಮಾತನಾಡಿದರು.ಜಡಿಸಿದ್ದೇಶ್ವರ ಸ್ವಾಮಿಜಿ ಆಶೀರ್ವಚನ ನೀಡಿದರು.
ಮುಖ್ಯ ಶಿಕ್ಷಕಿ ಬಿ ಆರ್ ಹುತಮಲ್ಲನವರ, ಎಮ್ ಸಿ ಸಂಗೊಳ್ಳಿ, ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಎಸ ಡಿ ಪಾಟೀಲ, ಮಹೇಶ ಅಂಗಡಿ, ಕೆ ಡಿ ಬೋಗುರ, ವಿ ಎಮ್ ಕಾಡೇಶನವರ, ಪಿ ವಿ ಗುಜ್ಜರ, ಸಿ ವೈ ಗಡದೆ, ಎಸ್ ಜಿ ತುರಮಂದಿ, ಎಸ್ ಎಮ್ ಪಾಟೀಲ ವೇದಿಕೆ ಮೇಲಿದ್ದರು.
ತರಬೇತಿ ಕುರಿತು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಕೆ ಬಿ ಕಡೆಮನಿ ಪ್ರಾರ್ಥಿಸಿದರು. ಆರ್ ವೈ ಜೇಡರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ