ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಲಗಾ-ಬಸ್ತವಾಡದಲ್ಲಿ ಲಕ್ಷ್ಮಿ ಗದ್ದುಗೆ ಮೇಲೆ ಧ್ವಜ ಹಾಕುವ ಕುರಿತು ಎರಡು ಗುಂಪುಗಳ ನಡುವೆ ಜಗಳ ನಡೆದು ಕಲ್ಲು ತೂರಾಟ ನಡೆದಿದೆ.
ಬುಧವಾರ ರಾತ್ರಿ ಈ ಘಟನೆ ನಡೆದಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಒಂದು ಗುಂಪು ಕನ್ನಡ ಧ್ವಜ ಹಾಕಿದ್ದರಿಂದ ಮತ್ತೊಂದು ಗುಂಪು ಎಂಇಎಸ್ ತನ್ನ ಧ್ವಜವೆಂದು ವಾಧಿಸುವ ಭಗವಾಧ್ವಜ ಹಾಕಿತು. ಇದರಿಂದ ಉದ್ವಿಗ್ನ ವಾತಾವರಣ ಉಂಟಾಗಿ ಕಲ್ಲು ತೂರಲಾಗಿದೆ.
ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ