ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಹಾಸನ ಜಿಲ್ಲಾಧಿಕಾರಿ ಜತೆ ಡಿಶುಂ ಡಿಶುಂ ಇಲ್ಲ. ಯಾರ ಜತೆಯೂ ಡಿಶುಂ ಮಾಡಬೇಕಾದ ಅಗತ್ಯವಿಲ್ಲ ಎಂದು ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೆ. ಬರ ಪರಿಹಾರಕ್ಕೆ ೧೦ ಕೋಟಿ, ಹಾಗೂ ೫ ಕೋಟಿ ಬಂದಿದ್ದರ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ಬಿಡುಗಡೆ ಮಾಡಿರಲಿಲ್ಲ. ಆಡಳಿತದಲ್ಲಿ ನಾನು ತಲೆ ಹಾಕಲ್ಲ. ಮಾಧ್ಯಮಗಳ ಮುಂದೆ ಅನುದಾನ ಬಿಡುಗಡೆ ಮಾಡಲು ಹೇಳಿದ್ದೆ. ಬಿತ್ತನೆ ಆಲೂಗಡ್ಡೆ ಸಮಸ್ಯೆಯಾಗಬಾರದು. ಈ ಹಿಂದೆ ಇದೇ ಕಾರಣಕ್ಕೆ ಗೋಲಿಬಾರ್ ಆಗಿತ್ತು. ಹಿಂದಿನ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಎಲ್ಲ ಮಾಹಿತಿ ಇದೆ. ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಅಂತ ಹೇಳಿದ್ದೇನೆ ಎಂದರು.
ವೈಯಕ್ತಿಕ ಕಾರಣಗಳಿಂದ ಜಿಲ್ಲಾಧಿಕಾರಿ ಜತೆ ಹೊಡೆದಾಟ ಮಾಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದರು.
ಚುನಾವಣೆಯಲ್ಲಿ ದೇವೇಗೌಡ್ರು, ಅವರ ಮಕ್ಕಳು ದುಡ್ಡು ಹಂಚ್ತಾರೆ ಅಂತಾ ಡಿಸಿ ಹಾಕಿದ್ರು. ಅಷ್ಟೇ ಅಲ್ಲ ಐಟಿ ದಾಳಿ ಮಾಡಿಸಿದ್ರು. ತರಕಾರಿ ಮಾರೋನು, ಪೂಜಾರಿಯನ್ನು ಬಿಡಲಿಲ್ಲ.ಅವರಿಗೇನು ಸಿಕ್ತು ಈಗ ಎಂದು ರೇವಣ್ಣ ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ