Belagavi NewsBelgaum NewsKannada NewsKarnataka NewsNationalPolitics

*ಸಂಪುಟ ಪುನಾರಚನೆ: ಖರ್ಗೆ ಜೊತೆ ಸಭೆ ಮಾಡಿದ ಶಾಸಕರು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸಂಪುಟ ಪುನಾರಚನೆ ಹಕ್ಕೋತ್ತಾಯಕ್ಕಾಗಿ ಕಾಂಗ್ರೆಸ್ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾಡಿದ್ದಾರೆ. 

ನವದೆಹಲಿಯ ರಾಜಾಜಿ ಮಾರ್ಗದಲ್ಲಿರುವ ನಿವಾಸದಲ್ಲಿ ಖರ್ಗೆ ಅವರನ್ನು ಭೇಟಿಯಾದ ಹಿರಿಯ ಶಾಸಕರು ಸಂಪುಟ ಪುನಾರಚನೆಗೆ ಮನವಿ ಮಾಡಿದ್ದಾರೆ. ಅಲ್ಲದೇ ಸಂಪುಟ ಪುನಾರಚನೆ ವೇಳೆ ತಮ್ಮನ್ನು ಪರಿಗಣಿಸುವಂತೆ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಖರ್ಗೆ ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರಾದ ಅಶೋಕ್ ಪಟ್ಟಣ, ಹಾಗೂ ಟಿಬಿ ಜಯಚಂದ್ರ ಸ್ಪಷ್ಟಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿರಿಯ ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಸಹನೂಭೂತಿಯಿಂದ ನಮ್ಮ ಮನವಿ ಕೇಳಿದ್ದು, ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮ್ಮ ಮನವಿ ನಾವು ಮಾಡಿದ್ದೇವೆ. ಸಿಎಂ ಬದಲಾವಣೆ ಕುರಿತು ನಾವು ಯಾವುದೇ ಚರ್ಚೆ ಮಾಡಿಲ್ಲ. ನಾಲ್ಕು ಗೋಡೆಗಳ ನಡುವೆ ಈ ವಿಷಯ ಇದೆ. ಖರ್ಗೆಯವರು ನಮಗೆ ಭರವಸೆ ಕೊಟ್ಟಿದ್ದಾರೆ. ಸಂಪುಟ ಪುನರ್ ರಚನೆ ಆಗುತ್ತೆ ಅನ್ನುವ ವಿಶ್ವಾಸ ಇದೆ ಎಂದರು.

ದೆಹಲಿಗೆ ತೆರಳಿದ ಪ್ರಮುಖ ಶಾಸಕರು ಯಾರು?

Home add -Advt

ಟಿ.ಬಿ. ಜಯಚಂದ್ರ – ಶಿರಾ

ಅಶೋಕ್ ಪಟ್ಟಣ್ – ರಾಮದುರ್ಗ

ಎಸ್.ಎನ್. ಸುಬ್ಬಾರೆಡ್ಡಿ – ಬಾಗೇಪಲ್ಲಿ

ಸಿ. ಪುಟ್ಟರಂಗಶೆಟ್ಟಿ – ಚಾಮರಾಜನಗರ

ಹಂಪನಗೌಡ ಬಾದರ್ಲಿ – ಸಿಂಧನೂರು

ಡಿ.ಜಿ. ಶಾಂತನಗೌಡ – ಹೊನ್ನಾಳಿ

ಬಸವರಾಜ್ ಶಿವಣ್ಣನವರ್ – ಬ್ಯಾಡಗಿ

ಎ.ಆರ್. ಕೃಷ್ಣಮೂರ್ತಿ – ಕೊಳ್ಳೇಗಾಲ

ಪ್ರಸಾದ್‌ ಅಬ್ಬಯ್ಯ – ಹುಬ್ಬಳ್ಳಿ ಧಾರವಾಡ ಪೂರ್ವ

ಯು.ಬಿ. ಬಣಕರ್ ಹಿರೇಕೆರೂರು

ಜಿ.ಎಸ್. ಪಾಟೀಲ್ – ರೋಣ

ಯಶವಂತರಾಯಗೌಡ ಪಾಟೀಲ್ – ಇಂಡಿ

ಕೆ. ಷಡಕ್ಷರಿ – ತಿಪಟೂರು

ಎಸ್‌.ಎನ್.ನಾರಾಯಣಸ್ವಾಮಿ – ಬಂಗಾರಪೇಟೆ

ಲಕ್ಷ್ಮಣ ಸವದಿ – ಅಥಣಿ

ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ

ಪ್ರಿಯಕೃಷ್ಣ – ಗೋವಿಂದರಾಜನಗರ

ರಮೇಶ್ ಬಂಡಿಸಿದ್ದೇಗೌಡ – ಶ್ರೀರಂಗಪಟ್ಟಣ

ಬಿ. ಶಿವಣ್ಣ – ಆನೇಕಲ್

ರಾಘವೇಂದ್ರ ಹಿಟ್ನಾಳ್ – ಕೊಪ್ಪಳ

ಬೇಳೂರು ಗೋಪಾಲಕೃಷ್ಣ – ಸಾಗರ

Related Articles

Back to top button