Latest

*ಕಾರು ಅಡ್ಡಗಟ್ಟಿ 1 ಕೋಟಿ ಹಣ, ಬೆಳ್ಳಿ ಗಟ್ಟಿ ದೋಚಿ ಪರಾರಿಯಾದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಕಾರು ಅಡ್ಡಗಟ್ಟಿದ ಗುಂಪೊಂದು 1 ಕೋಟಿ ರೂಪಾಯಿ ಹಣ ಸೇರಿದಂತೆ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ತುಮಕೂರಿನ ನೆಲಹಾಳ್ ಕ್ರಾಸ್ ಬಳಿ ನಡೆದಿದೆ.

ಬೆಳ್ಳಿ ಆಭರಣ ವ್ಯಾಪಾರಿಯ ಕಾರು ಅಡ್ಡಗಟ್ಟಿರುವ ಗ್ಯಾಂಗ್ ವೊಂದು 350 ಕೆಜಿ ಬೆಳ್ಳಿಗಟ್ಟಿ, 1 ಕೋಟಿ ರೂಪಾಯಿ ಹಣ ದರೋಡೆ ಮಾಡಿ ಪರಾರಿಯಾಗಿದೆ.

Home add -Advt

ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್ ಮಹದೇವ್ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂ ಗೆ ತೆರಳುತ್ತಿದ್ದರು. ಅನಿಲ್ ಅವರ ಜೊತೆ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್, ವಿನೋದ್ ಕೂಡ ಇದ್ದರು. ನೆಲಹಾಳ್ ಬಳಿ ಕಾರು ಬರುತ್ತಿದ್ದಂತೆ ಕಾರು ಅಡ್ಡಗಟ್ಟಿ ಹಲ್ಲೆನಡೆಸಿದ 8 ಜನರ ಗುಂಪು ಕಾರಿನಲ್ಲಿದ್ದ ಬೆಳ್ಳಿ ಗಟ್ಟಿ ಹಣವನ್ನು ಕದ್ದು ಅನಿಲ್ ಅವರನ್ನು ಕಾರಿನ ಸಮೇತ ಕರೆದೊಯ್ದಿದ್ದಾರೆ.

ಅಜ್ಜೇನಹಳ್ಳಿ ಬಳಿ ಅನಿಲ್ ಹಾಗು ಕಾರನ್ನು ಬಿಟ್ಟು ಹಣ ಹಾಗೂ ಬೆಳ್ಳಿ ಗಟ್ಟಿಯೊಂದಿಗೆ ಕಳ್ಳರ ಗ್ಯಾಂಗ್ ಎಸ್ಕೇಪ್ ಆಗಿದೆ. ಕೋರ ಪೊಲೀಸ್ ಠಾಣೆಯಲ್ಲಿ ಅನಿಲ್ ದೂರು ದಾಖಲಿಸಿದ್ದಾರೆ.

Related Articles

Back to top button