Latest

10 ಪರ್ವತಾರೋಹಿಗಳು ಹಿಮಪಾತಕ್ಕೆ ಬಲಿ ; 8 ಜನರ ರಕ್ಷಣೆ

ಪ್ರಗತಿ ವಾಹಿನಿ ಸುದ್ದಿ, ಉತ್ತರಾಖಂಡ್: ರಾಜ್ಯದ ಉತ್ತರ ಕಾಶಿ ಜಿಲ್ಲೆಯ ದ್ರೌಪದಿಕಾ ದಂಡ್ ಪರ್ವತ ಏರಲು ಹೊರಟಿದ್ದ 10 ಪರ್ವತಾರೋಹಿಗಳು ಹಿಮಪಾತದಿಂದ ಸಾವನ್ನಪ್ಪಿದ್ದಾರೆ.

14 ಸಾವಿರ ಅಡಿ ಎತ್ತರದ ಈ ಪರ್ವತವನ್ನು ಏರಲು ಒಟ್ಟು 29 ತರಬೇತಿ ನಿರತ ಪರ್ವತಾರೋಹಿಗಳು ಏರಲು ಹೊರಟಿದ್ದರು‌‌. ಈ ಪರ್ವತಾರೋಹಿಗಳು ಉತ್ತರಾಖಂಡದ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ನಲ್ಲಿ ತರಬೇತಿ ಪಡೆಯುತ್ತಿದ್ದರು.

10 ಪರ್ವತಾರೋಹಿಗಳು ಮೃತಪಟ್ಟಿರುವುದು ಖಚಿತವಾಗಿದೆ. 8 ಜನರನ್ನು ರಕ್ಷಿಸಲಾಗಿದ್ದು ಇನ್ನುಳಿದ 8 ಜನರನ್ನು ಹುಡಕಲಾಗುತ್ತಿದೆ ಎಂದು ತರಬೇತಿ ಶಾಲೆಯ ಪ್ರಾಂಶುಪಾಲ ಅಮಿತ್ ಬಿಷ್ಟ್ ತಿಳಿಸಿದ್ದಾರೆ.

ತರಬೇತಿ‌ ನಿರತ ಪರ್ವತಾರೋಹಿಗಳ ನಿಧನಕ್ಕೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.

ಲಿಫ್ಟ್ ಬಾರದೆ ತೆರೆದ ಬಾಗಿಲು ; ಯುವಕನ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button