ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತೀಯ ಸೇನಾ ಬಲವನ್ನು ಆಧುನೀಕರಣಗೊಳಿಸುವುದು, 101 ರಕ್ಷಣಾ ಉತ್ಪನ್ನಗಳ ಆಮದು ಬ್ಯಾನ್ ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ತನ್ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಯೋಜನೆ ಜಾರಿಯಾಗಲಿದೆ.
ಈ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ.
3.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ರಕ್ಷಣಾ ಉತ್ಪನ್ನವನ್ನು ಭಾರತವೇ ಉತ್ಪಾದನೆ ಮಾಡಲು, 4 ಲಕ್ಷ ಕೋಟಿ ರೂ. ಗಳನ್ನು ಭಾರತೀಯ ಸಂಸ್ಥೆಗಳಿಗೆ ಆತ್ಮನಿರ್ಭರ್ ಯೋಜನೆಯ ಅಡಿಯಲ್ಲಿ ನೆರವು ನೀಡಲು ನಿರ್ಧರಿಸಲಾಗಿದೆ.
ಒಟ್ಟಾರೆ ರಕ್ಷಣಾ ಕ್ಷೇತ್ರದಲ್ಲೂ ಭಾರತೀಯ ಕಂಪನಿಗಳಿಗೇ ಆದ್ಯತೆ ನೀಡಲುವ ಕೇಂದ್ರದ ಮಹತ್ವದ ಘೋಷಣೆ ಇದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ