ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮತ್ತೆ 107 ಜನರಲ್ಲಿ ಹೊಸದಾಗಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ನಿನ್ನೆ ಟೆಸ್ಟ್ ಮಾಡಲಾಗಿದ್ದ ಸ್ಯಾಂಪಲ್ ಗಳ ಪೈಕಿ 107 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ರಾಜ್ಯದಲ್ಲಿ ಈವರೆಗೆ 333 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಜತೆಗೆ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇಂದು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅಂತರಾಜ್ಯ ಪ್ರಯಾಣಿಕರ ಕಡ್ಡಾಯ ತಪಾಸಣೆ, ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಲಸಿಕೆ ಪ್ರಮಾಣಪತ್ರ ಕಡ್ಡಾಯ ಮಾಡುವುದು, ಕೋವಿಡ್ ಕೇರ್ ಸೆಂಟರ್ ಗಳ ಹೆಚ್ಚಳ, ಆಸ್ಪತ್ರೆಗೆ ದಾಖಲಾತಿ ಅಗತ್ಯತೆ ತಿಳಿಯಲು ಭೌತಿಕ ಅಥವಾ ಟೆಲಿ ಟ್ರಯಾಜಿಂಗ್, ಈ ಕೆಲಸಕ್ಕಾಗಿ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸೇವೆ ಬಳಕೆ, ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಹೋಟೆಲ್ ಗಳ ಜತೆ ಒಪ್ಪಂದ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಾತಿ, ಏಕರೂಪ ಚಿಕಿತ್ಸೆ, ಡಿಸ್ಚಾರ್ಜ್ ನೀತಿ ಹಾಗೂ ಕ್ವಾರಂಟೈನ್ ಮಾರ್ಗಸೂಚಿ, ಲಸಿಕೆ ಬಗ್ಗೆ ಅರಿವು ಅಭಿಯಾನ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಸಚಿವ ಆರ್.ಅಶೋಕ್ ಗೆ ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲಾದ ಕಂದಾಯ ಮಂತ್ರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ