Latest

ಸರಕಾರಿ ನೌಕರರಿಗೆ ಶೇ.11ರಷ್ಟು ಡಿಎ: ಒಂದೇ ನಿಮಿಷದಲ್ಲಿ ಸಹಿ ಹಾಕಿದ ಯಡಿಯೂರಪ್ಪ; ಏನಿದು 2 ದಾಖಲೆ?

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರಕಾರ ತನ್ನ ನೌಕರರಿಗೆ ಶೇ.11ರಷ್ಟು ಡಿಎ ನೀಡುತ್ತಿರುವ ಆದೇಶದ ಪ್ರತಿ ಇಂದು ಬೆಳಗ್ಗೆ ಸಿಕ್ಕಿತ್ತು. ತಕ್ಷಣ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯ ಸರಕಾರಿ ನೌಕರರಿಗೂ ಶೇ.11ರಷ್ಟು ಡಿಎ ನೀಡಬೇಕೆಂದು ವಿನಂತಿಸಿದಾಗ ಒಂದೇ ನಿಮಿಷದಲ್ಲಿ ಸಹಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಬಾಕಿ ಇರುವ ಶೇ.11ರಷ್ಟು ತುಟ್ಟಿ ಭತ್ಯೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಇದರಿಂದ ರಾಜ್ಯ ಸರಕಾರಿ ನೌಕರರಿಗೆ, ನಿಗಮ ಮಂಡಳಿಯ 3 ಲಕ್ಷ ನೌಕರರಿಗೆ ಮತ್ತು 4 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. 3 ರಿಂದ 6 ಸಾವಿರ ರೂ.ಗಳವರೆಗೆ ವೇತನ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದರು.

ಕೊರೋನಾ ಹಿನ್ನೆಲೆಯಲ್ಲಿ ಈ ಹಿಂದೆ 2 ವರ್ಷಗಳಿಂದ ಡಿಎ ನೀಡಲಾಗಿರಲಿಲ್ಲ. ಇದೀಗ ಒಮ್ಮೆಲೆ ಶೇ.11ರಷ್ಟು ಗರಿಷ್ಠ ಡಿಎ ನೀಡಿರುವುದು ಮತ್ತು ಒಂದೇ ನಿಮಿಷದಲ್ಲಿ ಮುಖ್ಯಮಂತ್ರಿಗಳು ಸಹಿ ಮಾಡಿರುವುದು ಎರಡೂ ದಾಖಲೆಯಾಗಿದೆ ಎಂದು ಅವರು ಹೇಳಿದರು.

ಇನ್ನು 2 -3 ದಿನದಲ್ಲಿ ಈ ಕುರಿತು ಅಧಿಕೃತ ಆದಶ ಹೊರಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದೂ ಅವರು ತಿಳಿಸಿದರು.

ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: ಖತರ್ನಾಕ್ ವಂಚಕರು ಬಲೆಗೆ; ಬೆಚ್ಚಿ ಬೀಳುತ್ತೀರಿ ಈ ಸುದ್ದಿ ಓದಿದರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button