*ಸಿಎಂ ಮೊಮ್ಮಗನಿಗೆ ಕ್ರಿಕೆಟಿಗರ ಜೊತೆ ಫೋಟೋಗ್ರಾಫ್, ಆಟೋಗ್ರಾಫ್ ತೆಗೆಸಲು 11 ಜನರನ್ನು ಕೊಂದ್ರು: ಆರ್ ಅಶೋಕ್ ಆರೋಪ*

ಪ್ರಗತಿವಾಹಿನಿ ಸುದ್ದಿ : 18 ವರ್ಷಗಳ ಬಳಿಕ ಕಪ್ ಗೆದ್ದ ಆರ್ಸಿಬಿ ವಿಜಯೋತ್ಸವ ನಡೆಸಿದ ವೇಳೆ ಸಂಭವಿಸಿದ ಕಾಲ್ತುಳಿತ ವಿಶ್ವಾದಾದ್ಯಂತ ಸದ್ದು ಮಾಡಿದೆ. ಇದೇ ವಿಚಾರವಾಗಿ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬಿಳುತ್ತಿವೆ.
ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸೋಷಿಯಲ್ ಪೋಸ್ಟ್ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾದ ಮೇಲೆ ಹರಿಹಾಯ್ದಿದ್ದಾರೆ.
ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಗೂಬೆ ಕೂರಿಸಿ ಹರಕೆಯ ಕುರಿ ಮಾಡಲು ಹೊರಟಿರುವ ಕೊಲೆಗಡುಕ ಕಾಂಗ್ರೆಸ್ 11 ಅಮಾಯಕ ಜನರ ಸಾವಿಗೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ ನವರೇ, ನಿಮ್ಮ ಮೊಮ್ಮಗನಿಗೆ ಕ್ರಿಕೆಟ್ ಆಟಗಾರರ ಜೊತೆ ಫೋಟೋಗ್ರಾಫ್, ಆಟೋಗ್ರಾಫ್ ತೆಗೆಸಿಕೂಡುವ ಭರದಲ್ಲಿ ಜನಸಾಮಾನ್ಯರ ಮನೆ ಮಕ್ಕಳನ್ನ ಕೊಂದು ಬಿಟ್ಟರಲ್ಲ ಸ್ವಾಮಿ, ನಿಮಗೆ ಆತ್ಮಸಾಕ್ಷಿ ಇದೆಯಾ?
ನಿಮ್ಮ ಮೊಮ್ಮಗನಿಗೆ ವೇದಿಕೆಯ ಮೇಲೆ ಕುರ್ಚಿ, ಜನಸಾಮಾನ್ಯರಿಗೆ ಬೀದಿಯಲ್ಲಿ ಕಾಲ್ತುಳಿತ. ಆಹಾ, ಇನ್ನು ಮುಂದೆಂದೂಸಮಾಜವಾದ, ಸಾಮಾಜಿಕ ನ್ಯಾಯ ಎಂದು ಭಾಷಣ ಬಿಗಿದು ಆ ಪದಗಳಿಗೆ, ಸಿದ್ಧಾಂತಗಳಿಗೆ ಅಪಮಾನ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.



