Latest

ರಾಜ್ಯದಲ್ಲಿಂದು ಕೊರೋನಾಗೆ 110 ಜನ ಬಲಿ; 5007 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 5007 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 110 ಜನರು ಸಾವಿಗೀಡಾಗಿದ್ದಾರೆ.

ಇಂದು ಬೆಂಗಳೂರಿನಲ್ಲಿ 2267, ಮೈಸೂರು 281, ಉಡುಪಿ 190, ಬಾಗಲಕೋಟೆ 184, ದಕ್ಷಿಣ ಕನ್ನಡ 180, ಧಾರವಾಡ 174, ಕಲಬುರಗಿ 159, ವಿಜಯಪುರ 158, ಬಳ್ಳಾರಿ 136, ಹಾಸನ 118, ಬೆಳಗಾವಿ 116, ಗದಗ 108, ರಾಯಚೂರು 107 ಜನರಿಗೆ ಸೋಂಕು ತಗುಲಿದೆ.

ಚಿಕ್ಕಬಳ್ಳಾಪುರ 92, ಉತ್ತರ ಕನ್ನಡ 88, ಬೀದರ್ 87, ದಾವಣಗೆರೆ 77, ಶಿವಮೊಗ್ಗ 67, ತುಮಕೂರು, ಹಾವೇರಿ 59, ಮಂಡ್ಯ 57, ಯಾದಗಿರಿ 53, ಕೊಪ್ಪಳ 39, ಕೋಲಾರ 36, ಚಾಮರಾಜನಗರ 33, ಚಿಕ್ಕಮಗಳೂರು 28, ಬೆಂಗಳೂರು ಗ್ರಾಮಾಂತರ, 26, ಚಿತ್ರದುರ್ಗ 13, ರಾಮನಗರ 12, ಕೊಡಗು 3 ಜನರಿಗೆ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 85,870. ಇಂದು 110 ಜನರು ಸಾವಿಗೀಡಾಗಿದ್ದು, ಒಟ್ಟೂ 1724 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರು 50, ಮೈಸೂರು ಹಾಗೂ ದಕ್ಷಿಣ ಕನ್ನಡ 6, ಧಾರವಾಡ, ಕಲಬುರಗಿ, ತುಮಕೂರು ತಲಾ 5 ಜನರು ಸಾವಿಗೀಡಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button