ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಪಡಿಸಿದ ೧೨ ಪ್ರಾಜೆಕ್ಟ್ ಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ.), ಆಯ್ ಆಯ್ ಎಸ್ ಸಿ ಕ್ಯಾಂಪಸ್, ಬೆಂಗಳೂರು ಪ್ರಾಯೋಜಕತ್ವಕ್ಕೆ ಆಯ್ಕೆಯಾಗಿವೆ ಎಂದು ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ತಿಳಿಸಿದ್ದಾರೆ.
ಕಂಪ್ಯೂಟರ್ ಸಾಯನ್ಸ್ ವಿಭಾಗದ ೦೬ ಪ್ರಾಜೆಕ್ಟ್, ಮೆಕ್ಯಾನಿಕಲ್ ವಿಭಾಗದ ೦೩ ಪ್ರಾಜೆಕ್ಟ್ ಗಳು, ಸಿವಿಲ್ ವಿಭಾಗದ ೦೨ ಪ್ರಾಜೆಕ್ಟ್, ಹಾಗೂ ಇಲೇಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ೦೧ ಪ್ರಾಜೆಕ್ಟ ಆಯ್ಕೆಯಾಗಿವೆ.
ಡಾ.ಸತೀಶ ಭೊಜನ್ನವರ, ಪ್ರೊ.ಸುನೀಲ ಹೆಬ್ಬಾಳೆ, ಡಾ. ಬಾಹುಬಲಿ ಅಕಿವಾಟೆ, ಡಾ. ಜಗನ್ನಾಥ ಜಾಧವ, ಪ್ರೊ.ಸುನೀಲ ಶಿಂದೆ, ಪ್ರೊ.ಅಶ್ವಿನಿ ಫರಲಾದ, ಪ್ರೊ.ಮಧುರಾಣ ಶಿದ್ದಿಭಾವಿ, ಪ್ರೊ.ಮಹೇಶ ಲಟ್ಟೆ, ಪ್ರೊ.ವೀರಣ್ಣಾ ಮೋದಿ, ಪ್ರೊ.ಶಂಕರಗೌಡಾ ಪಾಟೀಲ, ಪ್ರೊ.ಮಹೇಶ್ವರಿ ಬಿಸನಾಳ, ಮಾರ್ಗದರ್ಶನ ನೀಡಿದ್ದರು. ಒಟ್ಟು ೫೯.೫ ಸಾವಿರ ರೂ. ಪ್ರಾಜೆಕ್ಟ್ ಅನುದಾನ ದೊರಕಿದೆ.
ವಿಭಾಗ ಮುಖ್ಯಸ್ಥರಾದ ಡಾ. ಮಹಾಂತಯ್ಯ ಮಠಪತಿ, ಪ್ರೊ. ಪ್ರದೀಪ ಹೊದ್ಲೂರ, ಪ್ರೊ. ಬಸವರಾಜ ಚೌಕಿಮಠ, ಡಾ. ಸಂಜಯ ಅಂಕಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ