ಬೆಳಗಾವಿಗೆ ಎರಡಲ್ಲ, ಮೂರು ಡಿಸಿಎಂ ಸ್ಥಾನ ನೀಡಿದರೂ ಪರವಾಗಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಒಂದು ವೇಳೆ ಡಿಸಿಎಂ ಸ್ಥಾನ ನೀಡಿದರೆ ಬೇಡ ಎನ್ನಲ್ಲ ಎಂದು ಗೋಕಾಕ್​ ಶಾಸಕ ರಮೇಶ್​ ಜಾರಕಿಹೊಳಿ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಒಂದು ತಿಂಗಳು ತಡವಾದರೂ ಬೇಸರವಿಲ್ಲ. ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಆದರೆ ತಕ್ಷಣಕ್ಕೆ ಸಿಗಬೇಕೆನ್ನೋ ಅವಸರವಿಲ್ಲ ಎಂದರು.

ಇನ್ನು ಬೆಳಗಾವಿಗೆ ಎರಡಲ್ಲ, ಮೂವರು ಡಿಸಿಎಂಗಳಾದ್ರೂ ಪರವಾಗಿಲ್ಲ. ನನಗೆ ಡಿಸಿಎಂ ಸ್ಥಾನ ನೀದಿದರೆ ಬೇಡ ಎನ್ನಲ್ಲ. 17 ಜನರಿಗೂ ಸಚಿವ ಸ್ಥಾನ‌ ಕೊಡಬೇಕು ಎಂದು ಹೇಳಿದರು.

ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು, ಸೋತವರಿಗೂ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪೇನಿದೆ. ಅಧಿಕಾರ ತ್ಯಾಗ ಮಾಡಿದವರೆಲ್ಲರಿಗೂ ಸಚಿವ ಸ್ಥಾನ‌ಕೊಡಬೇಕು. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ಹೈ‌ಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

Home add -Advt

ನೂತನ ಶಾಸಕರ ಮುಖಂಡ ಎಂದು ನನ್ನನ್ನು ಗುರುತಿಸುತ್ತಿದ್ದಾರೆ. ಆದರೆ ನಾನು ಮುಖಂಡನಲ್ಲ. ನನ್ನ ಜೊತೆ ಇರುವ ಎಲ್ಲರೂ ನಾಯಕರೇ. ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ನಾವು 17 ಜನರಲ್ಲ, 50 ಜನರಿದ್ದೇವೆ ಎಂದು ತಿಳಿಸಿದರು.

Related Articles

Back to top button