Latest

ಫುಟ್ ಬಾಲ್ ಪಂದ್ಯಾವಳಿಯಲ್ಲಿ ಗಲಭೆ : 129 ಜನ ಸಾವು

ಪ್ರಗತಿವಾಹಿನಿ ಸುದ್ದಿ:  ಇಂಡೋನೇಷ್ಯಾದಲ್ಲಿ ಫುಟ್ ಬಾಲ್ ಪಂದ್ಯಾವಳಿಯ ವೇಳೆ ನಡೆದ ಗಲಭೆಯಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 129 ಜನ ಮೃತಪಟ್ಟಿದ್ದಾರೆ. 180 ಜನ ಗಾಯಗೊಂಡಿದ್ದಾರೆ.
  ಕ್ರೀಡಾಂಗಣದಲ್ಲಿ ಸ್ಥಳೀಯ ತಂಡಗಳಾದ  ಅರೆಮಾ ಎಫ್ ಸಿ ಮತ್ತು ಪೆರ್ಸೆಬಯಾ ಸುರಬಯಾ ನಡುವೆ ಪಂದ್ಯ ನಡೆಯುತ್ತಿತ್ತು. ಸಾವಿರಾರು ಜನ ಪಂದ್ಯ ವೀಕ್ಷಿಸಲು ಬಂದಿದ್ದರು.
 ಪಂದ್ಯದ ಕೊನೇಯಲ್ಲಿ ಸೋತ ತಂಡದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂಗಣದ ಒಳಗೆ ಇಳಿದು ಗಲಭೆ ನಡೆಸಿದರು. ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು 129 ಜನ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
https://pragati.taskdun.com/latest/helicopter-services-will-be-provided-in-bengaluru/

Related Articles

Back to top button