Kannada NewsKarnataka NewsLatest

*ದುಬಾರಿ ನಾಯಿಮರಿಗೆ ಹಠ ಹಿಡಿದ ಯುವಕ; ಮನೆ ಬಿಟ್ಟು ಹೋದ ತಾಯಿ; ಮುಂದೆ ಆಗಿದ್ದು ದುರಂತ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಕ್ಕು, ನಾಯಿ ಸಾಕುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಭಾರಿ ಬೆಲೆಯ ನಾಯಿಪ್ರೀತಿ ಇಲ್ಲೋರ್ವ ಯುವಕನನ್ನೇ ಬಲಿ ಪಡೆದ ವಿಚಿತ್ರ ಘಟನೆ ನಡೆದಿದೆ.

ಹುಬ್ಬಳ್ಳಿಯ ಮಿಷನ್ ಕಾಂಪೌಂಡ್ ನಲ್ಲಿ ಯುವಕನೊಬ್ಬ 2 ಲಕ್ಷ ಮೌಲ್ಯದ ದುಬಾರಿ ನಾಯಿಮರಿ ಕೊಡಿಸುವಂತೆ ತಾಯಿ ಬಳಿ ಹಠ ಹಿಡಿದಿದ್ದಾನೆ. ಮಗನ ಹಠಕ್ಕೆ ಬೇಸತ್ತ ತಾಯಿ ಅಂತಿಮವಾಗಿ ಮನೆಯನ್ನೇ ತೊರೆದು ಹೋಗಿದ್ದಾರೆ.

Home add -Advt

ತಾಯಿ ಮನೆ ಬಿಟ್ಟು ಹೋದ ಬಳಿಕ ಮನನೊಂದ ಯುವಕ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 24 ವರ್ಷದ ಅಲೆನ್ ವಿನೋದ್ ಭಸ್ಮೆ ಮೃತ ಯುವಕ. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.

Related Articles

Back to top button