Latest

*ತಾಯಿ ಶವದೊಂದಿಗೆ 2 ದಿನ ಮನೆಯಲ್ಲೇ ಕಳೆದ ಬಾಲಕ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಾಲಕನೊಬ್ಬ ತನ್ನ ತಾಯಿಯ ಶವದೊಂದಿಗೆ ಎರಡು ದಿನಗಳ ಕಾಲ ಮನೆಯಲ್ಲಿಯೇ ಕಳೆದ ಘಟನೆ ಬೆಂಗಳೂರಿನ ಆರ್.ಟಿ.ನಗರದ ಮನೆಯಲ್ಲಿ ನಡೆದಿದೆ.

ಫೆ.26ರಂದು ಅಣ್ಣಮ್ಮ ಎಂಬ 44 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ತನ್ನ ತಾಯಿ ತನ್ನ ಜೊತೆ ಮಾತು ಬಿಟ್ಟಿದ್ದಾಳೆ. ಮಲಗಿಕೊಂಡಿದ್ದಾರೆ ಎಂದೇ ಭಾವಿಸಿದ್ದ ಬಾಲಕ ಎರಡು ದಿನಗಳ ಕಾಲ ತಾಯಿಯ ಶವದೊಂದಿಗೆ ಕಳೆದಿದ್ದಾನೆ.

Home add -Advt

ಲೋ ಬಿಪಿ ಹಾಗೂ ಶುಗರ್ ನಿಂದಾಗಿ ಮಹಿಳೆ ಅಣ್ಣಮ್ಮ ಮೃತಪಟ್ಟಿದ್ದಾರೆ. 14 ವರ್ಷದ ಬಾಲಕನಿಗೆ ತಾಯಿ ಸಾವನ್ನಪ್ಪಿರುವುದು ಅರಿವಿಗೆ ಬಂದಿಲ್ಲ, ತನ್ನ ಜೊತೆ ಕೋಪ ಮಾಡಿಕೊಂಡು ಹೀಗೆ ಮಾಡುತ್ತಿದ್ದಾರೆ ಎಂದುಕೊಂಡು ಊಟ-ತಿಂಡಿ ಪಾರ್ಸಲ್ ತೆಗೆದುಕೊಂಡುಹೋಗಿ ಮನೆಯಲ್ಲಿ ತಿನ್ನುತ್ತಿದ್ದನಂತೆ.

ಈ ವೇಳೆ ತಂದೆಯ ಸ್ನೇಹಿತರು ಮನೆಗೆ ಬಂದಿದ್ದಾರೆ ಆಗಲೇ ಅಣ್ಣಮ್ಮ ಮೃತಪಟ್ಟ ವಿಷಯ ಗೊತ್ತಾಗಿದೆ. ಒಂದು ವರ್ಷದ ಹಿಂದೆ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಮೃತಪಟ್ಟಿದ್ದರು. ಈಗ ತಾಯಿಯೂ ಸಾವನ್ನಪ್ಪಿದ್ದು, ಬಾಲಕ ಅನಾಥವಾಗಿದ್ದಾನೆ.

*ಉಸಿರಾಟಕ್ಕೆ ಸಂಬಂಧಿಸಿದ ವಿಚಿತ್ರ ಸೋಂಕು; ಒಂದೇ ದಿನದಲ್ಲಿ 7 ಮಕ್ಕಳ ದುರ್ಮರಣ*

https://pragati.taskdun.com/7-childrendeathwest-bengaladenovirus/

Related Articles

Back to top button