ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ – ಪೋಕ್ಸೋ ಕಾಯ್ದೆಯನ್ವಯ ಬಂಧಿತರಾಗಿರುವ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈಗ ಕೆಲವೇ ಹೊತ್ತಿನ ಮೊದಲು ಅವರನ್ನು 1ನೇ ಹೆಚ್ಚುವರಿ ನ್ಯಾಯಾಧೀಶರಾದ ಕೋಮಲಾ ಅವರೆದುರು ಹಾಜರುಪಡಿಸಲಾಯಿತು. ಅವರು ಪ್ರಪಕರಣದ ವಿವರವನ್ನು ಪರಿಶೀಲಿಸಿದ ಬಳಿಕ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು.
ಹಾಗಾಗಿ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಯಿತು.
ಶುಕ್ರವಾರ ಜಾಮೀನು ಅರ್ಜಿ ಸಲ್ಲಿಸಲು ಶ್ರೀಗಳಿಗೆ ಅವಕಾಶವಿದೆ.
16 ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯೆಯಲ್ಲಿ ಗುರುವಾರ ರಾತ್ರಿ 10.15ರ ವೇಳೆಗೆ ಶ್ರೀಗಳನ್ನು ಬಂಧಿಸಲಾಗಿದೆ. ನಂತರ ಪ್ರಾಥಮಿಕ ವಿಚಾರಣೆ ನಡೆಸಿ, ವೈದ್ಯಕೀಯ ತಪಾಸಣ ನಡೆಸಲಾಯಿತು.
ಆ ನಂತರ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಅಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಶ್ರೀಗಳ ವಕೀಲರು ಪ್ರಯತ್ನಿಸಿದರೂ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ಹಾಗಾಗಿ ಜೈಲಿಗೆೆ ಕಳುಹಿಸಲಾಯಿತು.
ಶ್ರೀಗಳಿಗೆ ಉಸಿರಾಟದ ತೊಂದರೆ ಇದೆ ಹಾಗಾಗಿ ಆಸ್ಪತ್ರೆಗೆ ದಾಖಲಿಸಬೇಕು ಎನ್ನುವ ಮನವಿಯನ್ನು ಸಹ ಮಾಡಲಾಯಿತಾದರೂ ಅದಕ್ಕೂ ಪುರಸ್ಕಾರ ಸಿಗಲಿಲ್ಲ.
ಶ್ರೀಗಳ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣಗಳಡಿ ದೂರು ದಾಖಲಿಸಲಾಗಿದೆ. ಪರಿಶೀಷ್ಠ ಜಾತಿ ದೌರ್ಜನ್ಯ ಕಾಯ್ದೆಯಡಿಯೂ ದೂರು ಸಲ್ಲಿಕೆಯಾಗಿದೆ.
https://pragati.taskdun.com/latest/arrest-of-mr-muruga/
https://pragati.taskdun.com/latest/will-murugha-shree-be-arrested-at-night-here-is-the-reason-for-doubt/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ