Latest

ಬಿಜೆಪಿ ಶಾಸಕ ಸೇರಿ ಇಡೀ ಕುಟುಂಬಕ್ಕೆ ಕೊರೊನಾ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಮನೆ ಮನೆಗಳಲ್ಲೂ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದೀಗ ಬಿಜೆಪಿ ಶಾಸಕರೊಬ್ಬರ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಕುಟುಂಬದ 8 ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ. ಸ್ವತ: ಶಾಸಕರು, ಅವರ ಪತ್ನಿ, ಪುತ್ರ ಪ್ರಶಾಂತ್, ಸೊಸೆ, ಮತ್ತೋರ್ವ ಪುತ್ರ ಮಲ್ಲಿಕಾರ್ಜುನ, ಶಾಸಕರ ಆಪ್ತ ಸಹಾಯಕ ಹಾಗೂ ಮನೆ ಕೆಲಸದವರು ಸೇರಿ ಎಲ್ಲರಲ್ಲು ಕೊರೊನಾ ಸೋಂಕು ದೃಢಪಟ್ಟಿದೆ.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಸ್ಕಿ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಶಾಸಕರು ಸೇರಿ ಕುಟುಂಬಸ್ಥರೆಲ್ಲರೂ ಹೋಂ ಐಸೋಲೇಟ್ ಆಗಿದ್ದಾರೆ.

ರಾಜ್ಯ ಸರ್ಕಾರದ ಜಾಹೀರಾತಿಗೆ ಕುಮಾರಸ್ವಾಮಿ ಆಕ್ರೋಶ

Home add -Advt

Related Articles

Back to top button