Latest

*ಭಾರಿ ಮಳೆಗೆ ಒಮ್ಮೆಲೆ ಏರಿದ ಹಳ್ಳದ ನೀರು; ಒಂದೇ ಕುಟುಂಬದ ಮೂವರು ನೀರು ಪಾಲು*

ಪ್ರಗತಿವಾಹಿನಿ ಸುದ್ದಿ; ಬೀದರ್: ಏಕಾಏಕಿ ಸುರಿದ ಮಳೆಯಿಂದಾಗಿ ಒಮ್ಮೆಲೆ ಹಳ್ಳದ ನೀರು ತುಂಬಿ ರಭಸವಾಗಿ ಉಕ್ಕಿ ಹರಿದ ಪರಿಣಾಮ ಒಂದೇ ಕುಟುಂಬದ ಮೂವರು ನೀರು ಪಾಲಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

Home add -Advt

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ದಂಪತಿ ಹಾಗೂ ಮಕ್ಕಳು ಜಮೀನು ಕೆಲಸಕ್ಕೆಂದು ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಭಾರಿ ಮಳೆಯಿಂದಾಗಿ ಹಳ್ಳದ ನೀರು ಒಮ್ಮೆಲೆ ಏರಿಕೆಯಾಗಿದೆ. ಹಳ್ಳ ದಾಟುತ್ತಿದ್ದ ವೇಳೆ ನೀರು ರಭಸವಾಗಿ ಹರಿದ ಪರಿಣಾಮ ಕುಟುಂಬ ನೀರಿನಲ್ಲಿ ಕೊಚ್ಚಿ ಹೋಗಿದೆ.

ಘಟನೆಯಲ್ಲಿ ಪತಿ ನೀರಿನಲ್ಲಿ ಈಜಿ ದಡ ಸೇರಿದ್ದರೆ ಪತ್ನಿ ಹಾಗೂ ಇಬ್ಬರು ಮಕ್ಕಳು ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಮೂವರಿಗಾಗಿ ಶೋಧಕಾರ್ಯ ನಡೆಸಿದೆ.

https://pragati.taskdun.com/karnatakaheavy-rainimd-2/

Related Articles

Back to top button