Latest

*15 ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕ*

ಪ್ರಗತಿವಾಹಿನಿ ಸುದ್ದಿ: ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಪ್ರಾಂಶುಪಾಲ ಅವರು ‘ಶಿಸ್ತು ಕ್ರಮ’ ಎಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅಮರಾವತಿಯ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲ ಪ್ರಸನ್ನ ಸುಮಾರು 15 ವಿದ್ಯಾರ್ಥಿನಿಯರ ಕೂದಲನ್ನು ಕತ್ತರಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪಿ ಬ್ರಹ್ಮಾಜಿ ರಾವ್ ಹೇಳಿದ್ದಾರೆ. 

ವಿದ್ಯಾರ್ಥಿಗಳು 12ನೇ ತರಗತಿಗೆ ಸಮಾನವಾದ ಇಂಟರ್ಮೀಡಿಯೇಟ್ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ತಿಳಿಯುತ್ತಿದ್ದಂತೆ ನವೆಂಬರ್ 18, ಸೋಮವಾರ ಶಾಲೆಗೆ ಭೇಟಿ ನೀಡಿದ ಡಿಇಒ, ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪ್ರಾಂಶುಪಾಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೆಣ್ಣುಮಕ್ಕಳು ತಮ್ಮ ಕೂದಲನ್ನು ಸಡಿಲವಾಗಿ ಧರಿಸಿ ಕ್ಯಾಂಪಸ್‌ನಲ್ಲಿ ತಿರುಗಾಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸಲು ಅವರು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಾಂಶುಪಾಲ ಪ್ರಸನ್ನ ನನಗೆ ಹೇಳಿದ್ದಾರೆ ಎಂದು ಡಿಇಒ ಹೇಳಿದ್ದಾರೆ. ಇನ್ನು ಪ್ರಾಂಶುಪಾಲರನ್ನು ಬದಲಾಯಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಒತ್ತಾಯಿಸಿದ್ದಾರೆ.

Home add -Advt

Related Articles

Back to top button