ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ
ಮಾಜಿ ವಿಶ್ವಸುಂದರಿ, ಮಿಸ್ ಯೂನಿವರ್ಸ್ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಯ ಸುಶ್ಮಿತಾ ಸೇನ್ ಮದುವೆ ವಿಷಯ ಮತ್ತೆ ಭಾರಿ ಚರ್ಚೆಗೆ ಒಳಗಾಗುತ್ತಿದೆ.
43 ವರ್ಷದ ಸುಶ್ಮಿತಾ ಈವರೆಗೂ ಮದುವೆಯಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಈಗ ರೋಹ್ಮಾನ್ ಶಾಲ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಡಿದ್ದಾರೆ ಎನ್ನುವ ಸುದ್ದಿ ಹರಡಿದೆ. ವಿಶೇಷವೆಂದರೆ ರೋಹ್ಮಾನ್ ವಯಸ್ಸು ಇನ್ನೂ 28 ವರ್ಷ. ಅಂದರೆ ಅವರಿಬ್ಬರ ವಯಸ್ಸಿನ ಅಂತರ 15 ವರ್ಷ.
1994ರ ಮಿಸ್ ಯುನಿವರ್ಸ್ ಸುಶ್ಮಿತಾ ಸೇನೆ, ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. 2000ರಲ್ಲಿ ಮೊದಲ ಮಗು ರೆನೀಯನ್ನು ದತ್ತು ಪಡೆದ ಸುಶ್ಮಿತಾ ಆ ನಂತರ ಎರಡನೆ ಮಗು ಅಲಿಶಾ ಅವರನ್ನು ದತ್ತು ಪಡೆದಿದ್ದಾರೆ.
ಹಲವರ ಜೊತೆ ಸುಶ್ಮಿತಾ ಹೆಸರನ್ನು ಥಳಕು ಹಾಕಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿತ್ತು. ಆದರೆ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೋಹ್ಮಾನ್ ಜೊತೆ ಹಾಕಿದ ಫೋಟೋಗಳಲ್ಲಿ ಸುಶ್ಮಿತಾ ಬೆರಳಲ್ಲಿ ನೀಲಿ ಸ್ಟೋನ್ ಮತ್ತು ವಜ್ರದ ಹರಳಿರುವ ಉಂಗುರ ಕಾಣಿಸಿಕೊಂಡಿದ್ದರಿಂದ ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ.
ಖ್ಯಾತ ಮಾಡೆಲ್ ರೋಹ್ಮಾನ್ ಶಾಲ್ ಸುಶ್ಮಿತಾಗೆ ಜಿಮ್ ನಲ್ಲಿ ಪರಿಚಯವಾಗಿದ್ದಾರಂತೆ. ಅಲ್ಲಿಂದ ಇಬ್ಬರ ಸ್ನೇಹ ಶುರುವಾಗಿದ್ದು, ಈ ಗೆಳೆತನ ಪ್ರೀತಿಗೆ ತಿರುಗಿ ಈಗ ಮದುವೆ ವರೆಗೂ ಬಂದಿದೆ ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ