Latest

ಮನೆಯವರ ಎದುರೇ ನಾಗರ ಹಾವು ಕಚ್ಚಿ ಮಗು ಸಾವು

ಪ್ರಗತಿವಾಹಿನಿ ಸುದ್ದಿ, ಅಥಣಿ

ಮನೆಯವರೆಲ್ಲ ನೋಡ ನೋಡುತ್ತಿದ್ದಂತೆ ಆಟವಾಡುತ್ತಿದ್ದ ಮಗುವಿಗೆ ನಾಗರ ಹಾವು ಕಚ್ಚಿ ಮಗು ಸ್ಥಳದ್ಲೇ ಸಾವನಪ್ಪಿದೆ. ಅಥಣಿ ತಾಲೂಕಿನ ಪಾರ್ಥನಳ್ಳಿಯಲ್ಲಿ  ಈ ಘಟನೆ ನಡೆದಿದೆ.

Home add -Advt

ಯಾಕೂಬ್ ಬಿರಾದಾರ ಎಂಬುವವರ ಮನೆಯಲ್ಲಿ  ಯಾಕೂಬ್ ಅವರ 14 ತಿಂಗಳ ಮೊಮ್ಮಗಳು ಮನೆಯಲ್ಲಿ ಆಟವಾಡುತ್ತ ಕುಳಿತಿತ್ತು. ಈ ವೇಳೆ ನಾಗರ  ಹಾವೊಂದು ಅಲ್ಲಿಗೆ ಆಗಮಿಸಿದೆ. ಮಗುವಿನ ತಾಯಿ ಹಾವನ್ನು ನೋಡಿ ಕೂಗಿಕೊಂಡಿದ್ದಾಳೆ. ಅಜ್ಜ ಯಾಕೂಬ್ ತಕ್ಷಣ ಓಡಿ ಹೋಗಿ ಮಗುವನ್ನು ಎತ್ತಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಹಾವು ಮಗುವಿಗೆ ಕಚ್ಚಿದೆ.

ತಕ್ಷಣ ಮಗುವನ್ನು ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ವಿಷ ಏರಿ ಮಗು ಸಾವಿಗೀಡಾಗಿದೆ.

Related Articles

Back to top button