Latest

ಧರ್ಮಸಭೆಗೆ ಕರ್ನಾಟಕದಿಂದ ಹೊದವರು 1500 ಜನ!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಕರ್ನಾಟಕದಿಂದ ಭಾಗವಹಿಸಿದವರ ಸಂಖೆಯ 342 ಅಲ್ಲ, 1500 ಎನ್ನುವ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರನ್ನು ಉಲ್ಲೇಖಿಸಿ ಸುವ್ರಣ ನ್ಯೂಸ್ ಈ ಮಾಹಿತಿ ಹೊರಹಾಕಿದ್ದಾರೆ. ಕರ್ನಾಟಕದಿಂದ ಧರ್ಮಸಭೆಯಲ್ಲಿ 342 ಜನ ಭಾಗವಹಿಸಿದ್ದರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು.

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ 1500 ಜನ ಭಾಗವಹಿಸಿದ್ದರು. ಅವರಲ್ಲಿ 800 ಜನರನ್ನು ಈಗಾಗಲೆ ಗುರುತಿಸಲಾಗಿದೆ. ಇನ್ನೂ 700 ಜನರನ್ನು ಪತ್ತೆ ಮಾಡಬೇಕಿದೆ. ನಾಳೆ ಸಂಜೆಯೊಳಗೆ ಎಲ್ಲರನ್ನೂ ಪತ್ತೆ ಮಾಡಲಾಗುವುದು ಎಂದು ಜಾವೇದ್ ಅಕ್ತರ್ ತಿಳಿಸಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.

ದೊಹಲಿ ಧರ್ಮ ಸಭೆಯಲ್ಲಿ ರಾಷ್ಟ್ರದ ಎಲ್ಲ ಭಾಗಗಳಿಂದಲೂ ಭಾಗವಹಿಸಿದ್ದರು. ದೇಶದಲ್ಲಿ ಸೋಂಕಿತರ ಪೈಕಿ 355 ಜನರು ದೆಹಲಿ ಧರ್ಮಸಭೆಯಲ್ಲಿ ಭಾಗವಹಿಸಿ ಬಂದವರು ಎನ್ನುವುದು ಸಹ ಗೊತ್ತಾಗಿದೆ.

ದೆಹಲಿಗೆ ತೆರಳಿದ್ದ ಹಲವರು ಕರ್ನಾಟಕಕ್ಕೆ ಇನ್ನೂ ವಾಪಸ್ ಬಾರದೆ ಇರುವ ಸಾಧ್ಯತೆಯೂ ಇದೆ. ಧರ್ಮ ಪ್ರಚಾರವೇ ಅವರ ಉದ್ದೇಶವಾಗಿದ್ದು, ಪ್ರಚಾರ ಕಾರ್ಯಕ್ಕಾಗಿ ದೇಶದ ಬೇರೆ ಬೇರೆ ಭಾಗಕ್ಕೆ ತೆರಳಿರುವ ಸಾಧ್ಯತೆಯೂ ಇದೆ.

ಕರ್ನಾಟಕದ ಹಲವು ಜಿಲ್ಲೆಗಳಿಂದ ಧರ್ಮಸಭೆಗೆ ಜನರು ಹೇಗಿದ್ದರು. ಯಾವ ಜಿಲ್ಲೆಯಿಂದ ಎಷ್ಟು ಜನರು ಹೋಗಿದ್ದರು ಎನ್ನುವ ಸ್ಪಷ್ಟ ಮಾಹಿತಿ ಕೂಡ ಇನ್ನೂ ಗೊತ್ತಾಗಬೇಕಿದೆ.

ಸಂಬಂಧಿಸಿದ ಸುದ್ದಿಗಳನ್ನು ಓದಿ – 

ಮರ್ಕಜ್ ಧಾರ್ಮಿಕ ಸಭೆಯಿಂದ ಜಿಲ್ಲೆಗೆ ಹಿಂದಿರುಗಿದ ಜನರನ್ನು ಗುರುತಿಸಿ

ಬೆಳಗಾವಿಯ 27 ಜನರ ಗಂಟಲು ದ್ರವ ಸಂಗ್ರಹ

ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಕರ್ನಾಟಕದ 45 ಜನರು ಭಾಗಿ

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 10 ಜನರು ಕೊರೊನಾಗೆ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button