ಯುಕೆ 27 ಹೊಟೆಲ್ ಪಕ್ಕ ಖಾಸಗಿ ಕಟ್ಟಡದಲ್ಲಿ ಆರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
3 ವರ್ಷದ ಹಿಂದೆಯೇ ಮಂಜೂರಾಗಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ-ಕೆಎಟಿ ಬೆಳಗಾವಿಯಲ್ಲಿ ಇದೇ ವಿಧಾನಮಂಡಳದ ಅಧಿವೇಶನದ ವೇಳೆ ಉದ್ಘಾಟನೆಯಾಗಲಿದೆ. ಡಿ.17ರಂದು ಉದ್ಘಾಟನೆಗೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ.
ಕೊಲ್ಲಾಪುರ ವೃತ್ತದ ಬಳಿ (ಯುಕೆ 27 ಹೊಟೆಲ್ ಪಕ್ಕ) ಮಾಜಿ ಸಚಿವ ಉಮೇಶ ಕತ್ತಿಯವರ ಮಗಳ ಹೆಸರಿನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ 10 ಸಾವಿರ ಚದರ ಅಡಿಯ ಒಂದು ಮಹಡಿಯನ್ನುಬಾಡಿಗೆ ಪಡೆಯಲಾಗಿದ್ದು, ಸಧ್ಯಕ್ಕೆ ಅಲ್ಲಿಯೇ ಕೆಎಟಿ ನಡೆಸಲು ತೀರ್ಮಾನಿಸಲಾಗಿದೆ. ಕಟ್ಟಡಕ್ಕೆ ೀಗಾಗಲೆ ಬಾಡಿಗೆ ನೀಡಲಾಗುತ್ತಿದೆ. ಅಲ್ಲಿ ಸಿದ್ಧತೆಗಳೂ ನಡೆದಿವೆ.
ಹಲವು ವರ್ಷಗಳ ಹೋರಾಟದ ಫಲವಾಗಿ ಕೆಎಟಿ ಮಂಜೂರಾಗಿದ್ದು, ಉದ್ಘಾಟನೆಗೂ ಹೋರಾಟ ನಡೆಸಬೇಕಾಯಿತು. ಈಚೆಗೆ ವಕೀಲರ ಸಂಘ ಬೆಂಗಳೂರಿಗೆ ತೆರಳಿ ಶೀಘ್ರ ಉದ್ಘಾಟನೆಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿತ್ತು.
ಡಿ.17ಕ್ಕೆ ಉದ್ಘಾಟನೆ ನಡೆಯುವ ಬಗ್ಗೆ ಸೂಚನೆ ಬಂದಿರುವುದಾಗಿ ಉಮೇಶ ಕತ್ತಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕೆಎಟಿ ಆರಂಭವಾಗುವುದರಿಂದ ಸರಕಾರಿ ನೌಕರರು ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ. ಜೊತೆಗೆ ಇಲ್ಲಿಯ ನ್ಯಾಯವಾದಿಗಳಿಗೂ ಹೆಚ್ಚಿನ ಅವಕಾಶ ದೊರೆಯಲಿದೆ. ಆದರೆ ಹತ್ತಿರದಲ್ಲೇ ಕೆಎಟಿ ಇರುವುದರಿಂದ ಸಣ್ಣ ಪುಟ್ಟ ಪ್ರಕರಣಗಳಿಗೂ ಕೆಎಟಿ ಮೆಟ್ಟಿಲೇರಿ ಕೆಲಸದಲ್ಲಿ ಅನಗತ್ಯ ವಿಳಂಬಕ್ಕೂ ಕಾರಣವಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ