Latest

61 ವರ್ಷದ ವೃದ್ಧನನ್ನು ಹಠ ಹಿಡಿದು ಮದುವೆಯಾದ 18ರ ಯುವತಿ

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: 18 ವರ್ಷದ ಯುವತಿ 61 ವರ್ಷದ ವೃದ್ಧನನ್ನು ದುಂಬಾಲು ಬಿದ್ದು ವಿವಾಹವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

61 ವರ್ಷದ ಶಂಶಾದ್ ಹಾಗೂ 18 ವರ್ಷದ ಆಸಿಯಾ ಪ್ರೀತಿಸಿ ವಿವಾಹವಾಗಿದ್ದು, ಅಚ್ಚರಿಯೆಂದರೆ ಆಸಿಯಾಳೇ ಶಂಶಾದ್ ನನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ತನಗಿಂತ 43 ವರ್ಷ ಹಿರಿಯನಾದ ಶಂಶಾದ್ ನನ್ನು ಆಸಿಯಾ ಪ್ರೀತಿಸಲು ಕಾರಣ ಆತನ ಸಾಮಾಜಿಕ ಕಾರ್ಯಗಳಂತೆ.

ಶಂಶಾದ್ ರಾವಲ್ಪಿಂಡಿಯಾದ್ಯಂತ ಬಡ ಹುಡುಗಿಯರನ್ನು ವಿವಾಹ ಮಾಡಿಸುತ್ತಿದ್ದರು. ಅಲ್ಲದೇ ಅನೇಕರಿಗೆ ನೆರವಾಗುತ್ತಿದ್ದರು. ಶಂಶಾದ್ ಅವರ ಈ ಸಾಮಾಜ ಸೇವೆ ಕಂಡು ಆಕರ್ಷಿತಳಾದ ಆಸಿಯಾ ತನ್ನನ್ನು ವಿವಾಹವಾಗುವಂತೆ ಶಂಶಾದ್ ರನ್ನು ಕೇಳಿದ್ದಾಳೆ. ದಿನಗಳೆದಂತೆ ಆಸಿಯಾ ಪ್ರೀತಿಗೆ ಶಂಶಾದ್ ಮನಸೋತಿದ್ದಾರೆ.

ಆರಂಭದಲ್ಲಿ ಆಸಿಯಾ ಕುಟುಂಬ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ಆಸಿಯಾ 61ರ ಶಂಶಾದ್ ನನ್ನೇ ವಿವಾಹವಾಗುವುದಾಗಿ ಹಠ ಹಿಡಿದ್ದಾಳೆ. ಬಳಿಕ ಮನೆಯವರೂ ಒಪ್ಪಿದ್ದು, ಆಸಿಯಾ ಹಾಗೂ ಶಂಶಾದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Home add -Advt

ಮಗಳ ವಯಸ್ಸಿನ ಯುವತಿ ವಿವಾಹವಾದ ಶಂಶಾದ್, ಈ ವಯಸ್ಸಿನಲ್ಲಿ ನನಗೆ ಇಷ್ಟು ಕಾಳಜಿಯುಳ್ಳ ಜೀವನ ಸಂಗಾತಿ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ಡಿಜಿಪಿ ಶ್ರೀಕುಮಾರ್ ಗೆ ನ್ಯಾಯಾಂಗ ಬಂಧನ

Related Articles

Back to top button