ಬೆಳಗಾವಿಯ 18 ಕ್ಷೇತ್ರಕ್ಕೆ 185 ಅಭ್ಯರ್ಥಿಗಳು; ಬೆಳಗಾವಿ ಉತ್ತರದಲ್ಲಿ ಹೆಚ್ಚು, ಯಮಕನಮರಡಿಯಲ್ಲಿ ಕಡಿಮೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಸಮಯ ಮುಕ್ತಾಯವಾಗಿದ್ದು ಅಂತಿಮ ಕಣ ಸ್ಪಷ್ಟವಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಗೆ 185 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟೂ 47 ಜನರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 18 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಆಪ್ 15 ಹಾಗೂ ಜೆಡಿಎಸ್ 16 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಇತರ ರಾಜಕೀಯ ಪಕ್ಷಗಳು 43 ಹಾಗೂ ಪಕ್ಷೇತರರು 67 ಜನರು ಕಣದಲ್ಲಿದ್ದಾರೆ.
172 ಪುರುಷರು ಹಾಗೂ 13 ಮಹಿಳೆಯರು ಈ ಬಾರಿಯ ಚುನಾವಣೆ ಕಣದಲ್ಲಿದ್ದಾರೆ.
ನಿಪ್ಪಾಣಿಯಲ್ಲಿ 10, ಚಿಕ್ಕೋಡಿ ಸದಲಗಾದಲ್ಲಿ 11, ಅಥಣಿ 13, ಕಾಗವಾಡ 11, ಕುಡಚಿ 7, ರಾಯಬಾಗ 8, ಹುಕ್ಕೇರಿ 7, ಅರಬಾವಿ 13, ಗೋಕಾಕ 10, ಯಮಕನಮರಡಿ 5, ಬೆಳಗಾವಿ ಉತ್ತರ 15, ಬೆಳಗಾವಿ ದಕ್ಷಿಣ 8, ಬೆಳಗಾವಿ ಗ್ರಾಮೀಣ 12, ಖಾನಾಪುರ 13, ಕಿತ್ತೂರು 10, ಬೈಲಹೊಂಗಲ 9, ಸವದತ್ತಿ 10, ರಾಮದುರ್ಗದಲ್ಲಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ