ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಥಣಿ ತಾಲೂಕಿನಲ್ಲಿ ಕೋಟ್ಪಾ -೨೦೦೩ ಕಾಯ್ದೆಯಡಿಯಲ್ಲಿ ದಾಳಿ ನಡೆಸಿ ಒಟ್ಟು 19 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗಿದೆ.
ದಾಳಿಯಲ್ಲಿ ಸಾರ್ವಜನಿಕರಿಗೆ ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿ, ಕೋಟ್ಪಾ-೨೦೦೩ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿ ಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಜಿಲ್ಲಾ ಸಮಾಜ ಕಾರ್ಯಕರ್ತೆ, ಬಿ. ಎಸ್. ಚವ್ಹಾಣ ಹಿರಿಯ ಆರೋಗ್ಯ ಸಹಾಯಕರು ಹಾಗೂ ಪೊಲೀಸ್ ಸಿಬಂದ್ದಿ್ ದಾಳಿಯಲ್ಲಿ ಇದ್ದರು.