
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆಡಿ ಗ್ರಾಮದಲ್ಲಿಯ ಮಹಾಲಕ್ಷ್ಮಿ ಮಂದಿರ ನಿರ್ಮಾಣ, ಮರಗುಬಾಯಿ ಮಂದಿರ ನಿರ್ಮಾಣ ಸೇರಿದಂತೆ ತೋಟಗಳಲ್ಲಿಯ ರಸ್ತೆಗಳ ನಿರ್ಮಾಣ, ನೆಲಹಾಸು ಕಾಮಗಾರಿಗಳಿಗೆ ಸ್ಥಳೀಯ ಶಾಸಕರ ಅನುದಾನದಡಿ ೧೯ ಲಕ್ಷ ರೂ.ಮಂಜೂರಾಗಿರುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದರು.
ಸಮೀಪದ ಆಡಿ ಗ್ರಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾದ ಲಾಕಡೌನ್ ಅವಧಿಯಲ್ಲಿ ನಿಪ್ಪಾಣಿ ತಾಲೂಕಾಡಳಿತ ಜನರ ಸುರಕ್ಷತೆಗೆ ಕಾಳಜಿ ವಹಿಸಿದ್ದರಿಂದ ಗ್ರಾಮೀಣ ಭಾಗದಲ್ಲಿ ಯಾವುದೆ ಆತಂಕ ಮೂಡಲಿಲ್ಲ, ಸಾರ್ವಜನಿಕರು ಕೂಡ ತಾಲೂಕಾಡಳಿತಕ್ಕೆ ಸಹಕರಿಸಿದ್ದರಿಂದ ಕೊರೋನಾ ಹೋಗಲಾಡಿಸಲು ಸಾಧ್ಯವಾಗಿದೆ. ಆಡಿ ಗ್ರಾಮದ ಮೂಲಭೂತ ಸೌಕರ್ಯ್ಯಗಳನ್ನು ಪೂರೈಸಲು ಪ್ರಯತ್ನಿಸಿದ್ದು, ಮಂದಿರಗಳ ನಿರ್ಮಾಣ ಬಹುದಿನದ ಬೇಡಿಕೆ ಯಾಗಿತ್ತು. ಸಮಸ್ಯೆಗಳಿಗೆ ಸ್ಪಂದಿಸಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನಿಡಿದರು.
ತಾ.ಪಂ ಸದಸ್ಯೆ ಸಂಗಿತಾ ಪಾಟೀಲ, ಮಲಗೌಡಾ ಪಾಟೀಲ, ರೇಖಾ ಪಾಟೀಲ, ಬಾಳಾಸಾಬ ಪಾಟೀಲ, ಎನ್.ಕೆ.ವರಾಳೆ, ಸಿದ್ಧೇಶ್ವರ ಪಾಟೀಲ, ಸುಖದೇವ ಕುಂಭಾರ, ಅಪ್ಪಾಸಾಬ ಯೇಡುರೆ, ಪ್ರಕಾಶ ಪಾಟೀಲ, ಸಂಜಯ ಗುರವ, ಜಿ.ಪಂ.ಅಭಿಯಂತ ಎಸ್.ಟಿ.ಕಳಸಪ್ಪಗೋಳ, ಸಹಾಯಕ ವಿಜಯ ಮೋಗಲೆ, ವಿಶ್ವನಾಥ ಪಾಟೀಲ, ಕುಮಾರ ಪಾಟೀಲ, ನಿಲಕಂಠ ಮಗದುಮ್ಮ, ಗಿರಗೋಂಡಾ ಪಾಟೀಲ, ರಾಮಾ ಪಾಟೀಲ, ಶ್ರೀಪತಿ ನಾಯಿಕ್, ಇರಗೋಂಡಾ ಪಾಟೀಲ ಗ್ರಾ.ಪಂ ಸದಸ್ಯರು, ಸಿಬ್ಬಂದಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ